ಬೆಂಗಳೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 24 ಹೋಟೆಲ್‌ಗಳು (Hotel) ಹಾಗೂ 2 ರೆಸ್ಟೋರೆಂಟ್‌ಗಳನ್ನು (Restaurant) 100 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ (KJ George) ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸಿಗರಿಗೆ ಕೇವಲ ವಸತಿ ಒದಗಿಸುವುದಕ್ಕೆ ಸೀಮಿತವಾಗದೆ, ಉತ್ತಮ ಕೊಠಡಿ, ಗುಣಮಟ್ಟದ ಆಹಾರ, ಸ್ವಚ್ಛತೆ, ವೃತ್ತಿಪರ ಆತಿಥ್ಯ, ಸುಗಮ ಕಾಯ್ದಿರಿಸುವಿಕೆ ಹಾಗೂ ಒಟ್ಟಾರೆ ಅತಿಥಿ ಅನುಭವವನ್ನು ಉತ್ತಮಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು. ಇದನ್ನೂ ಓದಿ: ಸರ್ಕಾರಿ ನೌಕರಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿಗೆ ಸರ್ಕಾರ ಆದೇಶ ಪ್ರಕಟ
ಕೆಎಸ್‌ಟಿಡಿಸಿಯ ಹಲವು ಮಯೂರ ಹೋಟೆಲ್‌ಗಳು ಹಂಪಿ, ಜೋಗ್ ಫಾಲ್ಸ್, ನಂದಿ ಹಿಲ್ಸ್, ಮಡಿಕೇರಿ, ಕೆಆರ್‌ಎಸ್ ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಅತ್ಯಂತ ಸಮೀಪದ ವಿಶಿಷ್ಟ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಆತಿಥ್ಯ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗದಂತಹ ಸ್ಥಳಗಳಲ್ಲಿ ಕೆಎಸ್‌ಟಿಡಿಸಿಯ ಆಸ್ತಿಗಳು ಇರುವುದೇ ನಿಗಮದ ಪ್ರಮುಖ ಬಲವಾಗಿದೆ. ಈ ಸ್ಥಳದ ಅನುಕೂಲವನ್ನು ಉತ್ತಮ ಸೌಲಭ್ಯ ಮತ್ತು ವೃತ್ತಿಪರ ಸೇವೆಯೊಂದಿಗೆ ಜೋಡಿಸಿ ಪ್ರವಾಸಿಗರ ಅನುಭವ ಹಾಗೂ ನಿಗಮದ ಆದಾಯ ಎರಡನ್ನೂ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಫಾರ್ಮ್ – 7 ನಿಂದ ಯಾವ್ದೇ ಮತದಾರರ ಹೆಸರು ಡಿಲೀಟ್ ಮಾಡಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

ಕೊಠಡಿಯಿಂದ ಆತಿಥ್ಯ ಸೇವೆಯವರೆಗೆ ಸಮಗ್ರ ಸುಧಾರಣೆ:
100 ಕೋಟಿ ಮೇಲ್ದರ್ಜೆ ಯೋಜನೆಯಡಿ ಹೋಟೆಲ್ ಕೊಠಡಿಗಳು, ಸ್ನಾನಗೃಹಗಳು, ರೆಸ್ಟೋರೆಂಟ್‌ಗಳು, ಅಡುಗೆಮನೆಗಳು, ಸ್ವಾಗತ ಕೇಂದ್ರಗಳು, ಸಾಮಾನ್ಯ ಪ್ರದೇಶಗಳು, ಪೀಠೋಪಕರಣ, ಬೆಳಕಿನ ವ್ಯವಸ್ಥೆ, ಉದ್ಯಾನ ಮತ್ತು ಸುತ್ತಮುತ್ತಲಿನ ಪರಿಸರ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ಸುಧಾರಿಸಲಾಗುವುದು ಎಂದರು. ಇದನ್ನೂ ಓದಿ: ಚಾ.ನಗರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ, ಪರಿಶೀಲನೆ
ಮೂಲಸೌಕರ್ಯದ ಜೊತೆಗೆ ಸ್ವಚ್ಛತೆ, ಆಹಾರದ ಗುಣಮಟ್ಟ, ಕೊಠಡಿ ನಿರ್ವಹಣೆ, ಸಿಬ್ಬಂದಿಯ ಆತಿಥ್ಯ ಕೌಶಲ್ಯ, ಆನ್‌ಲೈನ್ ಕೊಠಡಿ ಕಾಯ್ದಿರಿಸುವ ವ್ಯವಸ್ಥೆ ಹಾಗೂ ಅತಿಥಿಗಳ ಅಭಿಪ್ರಾಯ ಸಂಗ್ರಹ ಮತ್ತು ಸ್ಪಂದನಾ ವ್ಯವಸ್ಥೆಗಳನ್ನೂ ಬಲಪಡಿಸಲಾಗುವುದು. ಆಯಾ ಹೋಟೆಲ್‌ಗಳ ಸ್ಥಳ, ಪ್ರವಾಸಿಗರ ಬೇಡಿಕೆ ಮತ್ತು ಕಾರ್ಯಸಾಧ್ಯತೆಯನ್ನು ಪರಿಗಣಿಸಿ 3-ಸ್ಟಾರ್ ಮಟ್ಟದ ಹಾಗೂ ಅದಕ್ಕಿಂತ ಉತ್ತಮ ಸೌಲಭ್ಯ ಮತ್ತು ಸೇವಾ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರತ್ಯೇಕ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಎಸ್‌ಐಆರ್ ವಿವಾದ | ಪರಿಷ್ಕೃತ ‘ಫಾರ್ಮ್ 6’ಗೆ ನಾವು ಅನುಮೋದನೆ ನೀಡಿಲ್ಲ: ಸುಪ್ರೀಂ
ಕೆಎಸ್‌ಟಿಡಿಸಿಯ ಮಯೂರ ಹೋಟೆಲ್‌ಗಳ ದೊಡ್ಡ ಶಕ್ತಿ ಅವುಗಳ ಸ್ಥಳ. ರಾಜ್ಯದ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಅತ್ಯಂತ ವಿಶಿಷ್ಟ ಸ್ಥಳಗಳಲ್ಲಿ ನಮ್ಮ ಆಸ್ತಿಗಳಿವೆ. ಈ ಸ್ಥಳದ ಅನುಕೂಲಕ್ಕೆ ಉತ್ತಮ ಕೊಠಡಿ, ಗುಣಮಟ್ಟದ ಆಹಾರ ಮತ್ತು ವೃತ್ತಿಪರ ಆತಿಥ್ಯವನ್ನು ಸೇರಿಸಬೇಕಾಗಿದೆ. 100 ಕೋಟಿ ರೂ. ಹೂಡಿಕೆಯ ಮೂಲಕ ಪ್ರವಾಸಿಗರ ಒಟ್ಟಾರೆ ಅನುಭವವನ್ನು ಮೇಲ್ದರ್ಜೆಗೇರಿಸಿ, ಕೆಎಸ್‌ಟಿಡಿಸಿಯ ಆಸ್ತಿಗಳನ್ನು ಹೆಚ್ಚು ಸ್ಪರ್ಧಾತ್ಮಕ ಮತ್ತು ಆದಾಯದಾಯಕವಾಗಿಸುವುದು ನಮ್ಮ ಗುರಿ ಎಂದು ಹೇಳಿದರು. ಇದನ್ನೂ ಓದಿ: ಕಾರಿನಲ್ಲೇ ಕ್ಯಾಬ್ ಚಾಲಕ ಅನುಮಾನಾಸ್ಪದ ಸಾವು – ಹೃದಯಾಘಾತ ಶಂಕೆ

ಸರ್ಕಾರಿ ಹೋಟೆಲ್ ಎನ್ನುವ ಕಾರಣಕ್ಕೆ ಪ್ರವಾಸಿಗರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಇರಬಾರದು. ಸ್ಥಳ, ಸೌಲಭ್ಯ ಮತ್ತು ಸೇವೆ – ಈ ಮೂರರಲ್ಲೂ ಮಯೂರ ಹೋಟೆಲ್‌ಗಳು ಉತ್ತಮ ಮಾನದಂಡ ನಿರ್ಮಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ರಾಜ್ಯದ ಕ್ರೀಡಾಪಟುಗಳಿಗೆ ಬಹುಮಾನದ ಮೊತ್ತ ಹೆಚ್ಚಳ ನಾಳೆ ತೀರ್ಮಾನ – ಪರಮೇಶ್ವರ
ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ಮಯೂರ ಹೋಟೆಲ್‌ಗಳಿಗೆ ವಿಶಿಷ್ಟ ಸ್ಥಳಗಳ ಬಲದ ಜೊತೆಗೆ ಜನರಿಗೆ ಪರಿಚಿತವಾದ ಹೆಸರೂ ಇದೆ. ಆಧುನಿಕ ಸೌಲಭ್ಯಗಳು ಮತ್ತು ಉತ್ತಮ ಸೇವೆಯೊಂದಿಗೆ ಅವುಗಳನ್ನು ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು, ಕೊಠಡಿಗಳ ಬಳಕೆಯನ್ನು ಹೆಚ್ಚಿಸಲು ಹಾಗೂ ಆದಾಯವನ್ನು ಗಣನೀಯವಾಗಿ ವೃದ್ಧಿಸಲು ಅವಕಾಶವಿದೆ. 100 ಕೋಟಿ ರೂ. ಯೋಜನೆಯನ್ನು ಆದ್ಯತೆ ಆಧಾರದಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು. ಇದನ್ನೂ ಓದಿ: ಚುನಾವಣಾ ಆಯೋಗ ನಾವು ಕೊಟ್ಟ ದೂರಿನ ಅನ್ವಯ FIR ಹಾಕಬೇಕು: ಪರಮೇಶ್ವರ್
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಈ ಯೋಜನೆಯನ್ನು ಕೇವಲ ಕಟ್ಟಡಗಳ ನವೀಕರಣವಾಗಿ ನೋಡುತ್ತಿಲ್ಲ. ಪ್ರತಿಯೊಂದು ಆಸ್ತಿಯ ಸ್ಥಳ, ಪ್ರವಾಸಿಗರ ಬೇಡಿಕೆ, ಪ್ರಸ್ತುತ ಬಳಕೆ ಮತ್ತು ಆದಾಯದ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿ ಸುಧಾರಣಾ ಯೋಜನೆ ರೂಪಿಸಲಾಗುವುದು. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸೇವಾ ಗುಣಮಟ್ಟ, ಕೊಠಡಿ ನಿರ್ವಹಣೆ, ಆಹಾರದ ಗುಣಮಟ್ಟ, ಆನ್‌ಲೈನ್ ಕಾಯ್ದಿರಿಸುವಿಕೆ ಮತ್ತು ಅತಿಥಿಗಳ ಪ್ರತಿಕ್ರಿಯೆ ವ್ಯವಸ್ಥೆಯನ್ನು ಬಲಪಡಿಸಿ ಮಯೂರ ಹೋಟೆಲ್‌ಗಳಲ್ಲಿ ಒಟ್ಟಾರೆ ಆತಿಥ್ಯ ಅನುಭವವನ್ನು ಉತ್ತಮಪಡಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕದಲ್ಲಿ ಕಾರಿಗೆ ಟ್ರಕ್ ಡಿಕ್ಕಿ – ತೆಲಂಗಾಣ ಮೂಲದ ಮಹಿಳೆ ಸಾವು

