ಜೈಪುರ: ಚುನಾವಣೆ ಸನಿಹದಲ್ಲಿ ರಾಜಸ್ಥಾನ ರಾಜಕೀಯದಲ್ಲಿ (Rajasthan Politics) ಭಾರೀ ಹೈಡ್ರಾಮಾಗಳು ನಡೆದಿವೆ. ಸಂಪುಟದಿಂದ ವಜಾ ಆಗಿರುವ ರಾಜೇಂದ್ರ ಸಿಂಗ್ ಗುಧಾ (Rajendra Singh Gudha) ಅವರು ಸಿಎಂ ಅಶೋಕ್ ಗೆಹ್ಲೋಟ್ (CM Ashok Gehlot) ವಿರುದ್ಧ 500 ಕೋಟಿ ಭ್ರಷ್ಟಾಚಾರದ (Corruption) ಬಾಂಬ್ ಸಿಡಿಸಿದ್ದಾರೆ.
ಸೋಮವಾರ ಗುಧಾಗೆ ವಿಧಾನಸಭೆ ಪ್ರವೇಶಿಸಲು ಗುಂಪೊಂದು ಅವಕಾಶ ನೀಡಿಲ್ಲ. ವಿಧಾನಸಭೆಯ ಹೊರಗೆ ಅವರನ್ನು ತಡೆದು ಹಾಗೆಯೇ ಕಳಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಸಿಎಂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ರೆಡ್ ಡೈರಿ ಬಗ್ಗೆ ಪ್ರಸ್ತಾಪಿಸಲು ಮುಂದಾಗಿದ್ದೆ. ಆದರೆ ನಾನು ಬಿಜೆಪಿ ಜೊತೆ ಇದ್ದೇನೆ ಎಂಬ ಕಾರಣಕ್ಕೆ ಸ್ಪೀಕರ್ ತಮಗೆ ಸದನದಲ್ಲಿ ಮಾತಾಡಲು ಅವಕಾಶ ಕೊಡುತ್ತಿಲ್ಲ ಎಂದು ದೂರಿದರು. ಇದನ್ನೂ ಓದಿ: ಸಿಂಗಾಪುರದಲ್ಲಿ ತಂತ್ರಗಾರಿಕೆ – ಕಾಂಗ್ರೆಸ್ ಸರ್ಕಾರಕ್ಕೆ ಆಪರೇಷನ್ ಭೀತಿ?
Advertisement
#WATCH | Former Rajasthan Minister Rajendra Singh Gudha, says "Around 50 people attacked me, punched me, kicked me and Congress leaders dragged me out of the Assembly. The Chairman of the Rajasthan Assembly did not even allow me to speak. There were allegations against me that I… pic.twitter.com/YamjvHUcCO
— ANI MP/CG/Rajasthan (@ANI_MP_CG_RJ) July 24, 2023
Advertisement
ಕಾಂಗ್ರೆಸ್ ಶಾಸಕರು (Congress MLAs) ಸೇರಿಕೊಂಡು ನನ್ನ ಮೇಲೆ ದಾಳಿ ನಡೆಸಿದರು. ನನ್ನ ಕೈಯಲ್ಲಿದ್ದ ಡೈರಿಯ ಪೇಜ್‍ಗಳನ್ನು ಹರಿದು ಹಾಕಿದರು ಎಂದು ಆಪಾದಿಸಿ ಕಣ್ಣೀರಿಟ್ಟರು. ಸದನಕ್ಕೆ ನೀನು ಬರುವುದು ಬೇಡ. ಬಂದರೆ ಜೈಲಿಗೆ ಹಾಕಿಸುತ್ತೇವೆ ಎಂದು ಬೆದರಿಕೆ ಹಾಕ್ತಿದ್ದಾರೆ ಎಂದು ಆರೋಪಿಸಿದರು.
Advertisement
Advertisement
ಸಚಿವ ಧರ್ಮೇಂದ್ರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ (IT Raid) ನಡೆದ ಸಂದರ್ಭದಲ್ಲಿ, ಸಿಎಂ ಈ ಡೈರಿಯನ್ನು ನನಗೆ ನೀಡಿದರು. ಇದರಲ್ಲಿ 500 ಕೋಟಿ ವ್ಯವಹಾರದ ಉಲ್ಲೇಖಗಳಿವೆ. ಇದೇನಾದ್ರೂ ತನಿಖಾ ಸಂಸ್ಥೆಗೆ ಸಿಕ್ಕಿದ್ರೆ ಗೆಹ್ಲೋಟ್ ಜೈಲುಪಾಲಾಗುತ್ತಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
Web Stories