ಬಾಲಿವುಡ್‌ನತ್ತ ‘ಆರ್‌ಆರ್‌ಆರ್’ ಹೀರೋ ರಾಮ್ ಚರಣ್

Public TV
1 Min Read
RAM CHARAN 1 1

ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ಬೆನ್ನಲ್ಲೇ ‘ಗೇಮ್ ಚೇಂಜರ್’ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿರುವ ವೇಳೆ, ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದನ್ನು ರಾಮ್ ಚರಣ್ ಒಪ್ಪಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

Ram Charan

ಈಗ ಚಿತ್ರರಂಗದಲ್ಲಿ ಸೌತ್ ಸಿನಿಮಾಗಳೇ ಕಮಾಲ್ ಮಾಡುತ್ತಿವೆ. ಹಾಗಾಗಿ ಸೌತ್ ನಟರಿಗೆ ಬಾಲಿವುಡ್ ನಿರ್ದೇಶಕರು ಮಣೆ ಹಾಕ್ತಿದ್ದಾರೆ. ಸದ್ಯ ರಾಮ್ ಚರಣ್ ಅವರು ಹೊಸ ಚಿತ್ರಕ್ಕಾಗಿ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಕಡೆಗೂ ಬ್ರೇಕಪ್ ಬಗ್ಗೆ ಮೌನ ಮುರಿದ ‘ಬೃಂದಾವನ’ ಹೀರೋ

sanjay leela bansali

ಅಮಿಶ್ ಅವರ ‘ದಿ ಲೆಜೆಂಡ್ ಆಫ್ ಸುಹೇಲ್ದೇವ್’ ಪುಸ್ತಕವನ್ನು ಆಧರಿಸಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಈ ಕಥೆಯ ನಾಯಕನಾಗಿ ರಾಮ್ ಚರಣ್ ಕಾಣಿಸಿಕೊಳ್ತಿದ್ದಾರೆ. ಅದಕ್ಕಾಗಿ ಈಗಾಗಲೇ ಮುಂಬೈನಲ್ಲಿ ಬನ್ಸಾಲಿ ಅವರನ್ನು ರಾಮ್ ಭೇಟಿಯಾಗಿ ಮಾತು ಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯದಲ್ಲೇ ಬನ್ಸಾಲಿ ಮತ್ತು ರಾಮ್‌ಚರಣ್ ಕಾಂಬೋ ಸಿನಿಮಾ ಕುರಿತು ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ. ‘ಗೇಮ್ ಚೇಂಜರ್’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article