ರಾಂಚಿ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್‍ನಲ್ಲಿ 4,000 ರನ್‍ಗಳನ್ನು ಪೂರೈಸಿ ವಿಶೇಷ ಸಾಧನೆ ಮಾಡಿದ್ದಾರೆ.
ಈ ಮೂಲಕ 4000 ರನ್‌ಗಳನ್ನು ಪೂರೈಸಿದ ಟೀಂ ಇಂಡಿಯಾ 17ನೇ ಆಟಗಾರ ಹಾಗೂ ವೇಗವಾಗಿ 4,000 ರನ್ ಗಳಿಸಿದ ಭಾರತದ 11ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೇವಲ 79 ಇನ್ನಿಂಗ್ಸ್‌ಗಳಲ್ಲಿ 4,000 ರನ್‌ಗಳಿಸಿದ ಸಾಧನೆ ಮಾಡಿದ್ದರು. ಇದನ್ನೂ ಓದಿ: ಭರ್ಜರಿ ಕಂಬ್ಯಾಕ್; ಅಶ್ವಿನ್ ಸ್ಪಿನ್ ಮೋಡಿಗೆ ಮಕಾಡೆ ಮಲಗಿದ ಇಂಗ್ಲೆಂಡ್ – ಸರಣಿ ಗೆಲುವಿನ ವಿಶ್ವಾಸದಲ್ಲಿ ಭಾರತ
Advertisement
Advertisement
2013ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ರೋಹಿತ್ ಇದುವರೆಗೆ ಭಾರತ ಪರ 58 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್‍ನಲ್ಲಿ 44ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಅವರು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 212ರ ಅತ್ಯಧಿಕ ಸ್ಕೋರ್‌ನೊಂದಿಗೆ ದೀರ್ಘ ಸ್ವರೂಪದಲ್ಲಿ 11 ಶತಕಗಳು ಮತ್ತು 16 ಅರ್ಧಶತಕಗಳನ್ನು ಗಳಿಸಿದ್ದಾರೆ.
Advertisement
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಪಂದ್ಯದಲ್ಲಿ ರೋಹಿತ್ 21 ರನ್ ಗಳಿಸುವ ಮೂಲಕ 4,000 ರನ್ ಗಡಿ ಮುಟ್ಟಿದರು. ಈ ಸಾಧನೆಯೊಂದಿಗೆ, ಇಂಗ್ಲೆಂಡ್ ವಿರುದ್ಧ 1,000 ರನ್‍ಗಳನ್ನು ಪೂರೈಸಿದ್ದಲ್ಲೇ ತವರಿನಲ್ಲಿ 2,200ಕ್ಕೂ ಹೆಚ್ಚು ರನ್‍ಗಳನ್ನು ಗಳಿಸಿದ ಸಾಧಕರೂ ಎನಿಸಿಕೊಂಡಿದ್ದಾರೆ.
Advertisement
ರಾಜ್‍ಕೋಟ್‍ನಲ್ಲಿ ರೋಹಿತ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‍ನಲ್ಲಿ ಮೂರನೇ ಶತಕ ಸಿಡಿಸಿದ್ದರು. ಟೆಸ್ಟ್‌ನ ಮೊದಲನೇ ದಿನ ಅವರು 196 ಎಸೆತಗಳಲ್ಲಿ 131 ರನ್ ಗಳಿಸಿದ್ದರು. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಕಮಾಲ್ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್ ಮಾಂತ್ರಿಕ
ವೇಗವಾಗಿ 4,000 ಟೆಸ್ಟ್ ರನ್ ಗಳಿಸಿದ ಟೀಂ ಇಂಡಿಯಾ ಬ್ಯಾಟರ್ಸ್ ಲಿಸ್ಟ್:
79 ಇನಿಂಗ್ಸ್ – ವೀರೇಂದ್ರ ಸೆಹ್ವಾಗ್
81 ಇನ್ನಿಂಗ್ಸ್ – ಸುನಿಲ್ ಗವಾಸ್ಕರ್
84 ಇನಿಂಗ್ಸ್ – ರಾಹುಲ್ ದ್ರಾವಿಡ್
84 ಇನಿಂಗ್ಸ್ – ಚೇತೇಶ್ವರ ಪೂಜಾರ
86 ಇನಿಂಗ್ಸ್ – ಸಚಿನ್ ತೆಂಡೂಲ್ಕರ್
88 ಇನಿಂಗ್ಸ್ – ಎಂ ಅಜರುದ್ದೀನ್
89 ಇನ್ನಿಂಗ್ಸ್ – ವಿರಾಟ್ ಕೊಹ್ಲಿ
96 ಇನಿಂಗ್ಸ್ – ಜಿ ವಿಶ್ವನಾಥ್
96 ಇನ್ನಿಂಗ್ಸ್ – ಗೌತಮ್ ಗಂಭೀರ್
99 ಇನಿಂಗ್ಸ್ – ಎಂ ಅಮರನಾಥ್
100 ಇನಿಂಗ್ಸ್ – ರೋಹಿತ್ ಶರ್ಮಾ*