ದುಬೈ: ಏಕದಿನ ಕ್ರಿಕೆಟ್‌ನಲ್ಲಿ (ODI) 11,000 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ. ರೋಹಿತ್ 261ನೇ ಇನ್ನಿಂಗ್ಸ್‌ನಲ್ಲಿ 11,000 ರನ್ ಪೂರೈಸಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಪಂದ್ಯದಲ್ಲಿ 12 ರನ್‌ಗಳಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 11,000 ರನ್ ವೇಗವಾಗಿ ಪೂರೈಸಿದ ಬ್ಯಾಟ್ಸ್‌ಮನ್ ಸಾಲಿನಲ್ಲಿ 2ನೇ ಸ್ಥಾನಕ್ಕೆ ಶರ್ಮಾ ಜಿಗಿದಿದ್ದಾರೆ. ಇದನ್ನೂ ಓದಿ: ಗಿಲ್ ಶತಕದಾಟ, ಶಮಿ ಬೆಂಕಿ ಬೌಲಿಂಗ್ – ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ
Advertisement
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 222 ಇನ್ನಿಂಗ್ಸ್‌ಗಳಲ್ಲಿ 11,000 ರನ್ ಪೂರೈಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. 276ನೇ ಇನ್ನಿಂಗ್ಸ್‌ನಲ್ಲಿ 11,000 ರನ್ ಪೂರೈಸಿ ಸಚಿನ್ ಎರಡನೇ ಸ್ಥಾನದಲ್ಲಿದ್ದರು. ಇದೀಗ ರೋಹಿತ್ ಶರ್ಮಾ ಅವರ ದಾಖಲೆ ಮುರಿದು ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ಟಾರ್ಕ್ ದಾಖಲೆ ಉಡೀಸ್ – ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದು ಶಮಿ ರೆಕಾರ್ಡ್
Advertisement
Advertisement
ಚಾಂಪಿಯನ್ಸ್ ಟ್ರೋಫಿಯ ಇಂದಿನ ಪಂದ್ಯದಲ್ಲಿ ನಾಲ್ಕನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಹಿಟ್‌ಮ್ಯಾನ್ ವಿಶೇಷ ಮೈಲಿಗಲ್ಲು ತಲುಪಿದರು. ಕೊಹ್ಲಿ 11,831 ಎಸೆತಗಳಲ್ಲಿ 11,000 ರನ್ ಪೂರೈಸಿದ್ದರೆ, ರೋಹಿತ್ ಶರ್ಮಾ 11,868 ಎಸೆತಗಳಲ್ಲಿ 11,000 ರನ್ ಕಲೆಹಾಕಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಹಗರಣ – ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಬಿಗ್ ರಿಲೀಫ್!
Advertisement