ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಕನ್ನಡಿಗರಾದ ರೋಜರ್ ಬಿನ್ನಿ (Roger Binny) ಪಟ್ಟಕ್ಕೇರಬಹುದೆಂದ ಚರ್ಚೆ ಜೋರಾಗಿದೆ.
Advertisement
ಅ.18ಕ್ಕೆ ಬಿಸಿಸಿಐನ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಸಿಸಿಐನ ಮುಂದಿನ ಅಧ್ಯಕ್ಷ, ಕಾರ್ಯದರ್ಶಿಯನ್ನು ನಿರ್ಧರಿಸುವ ಚುನಾವಣೆಯೂ ನಡೆಯಲಿದೆ. ಈ ನಡುವೆ ಸೌರವ್ ಗಂಗೂಲಿ (Sourav Ganguly) ಅಧಿಕಾರವಧಿ ಅಂತ್ಯದ ಬಳಿಕ ಅಧ್ಯಕ್ಷ ಗಾದಿಯಲ್ಲಿ ಇದೀಗ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರೋಜರ್ ಬಿನ್ನಿ ಹೆಸರು ಕೇಳಿ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಈವರೆಗೆ ಬಿಸಿಸಿಐನ ಸರ್ವಸದಸ್ಯರ ಸಭೆಯಲ್ಲಿ ಕೆಎಸ್‍ಸಿಎಯನ್ನು (KSCA) ಕಾರ್ಯದರ್ಶಿ ಸಂತೋಷ್ ಮೆನನ್ ಪ್ರತಿನಿಧಿಸುತ್ತಿದ್ದರು. ಈ ಬಾರಿ ಆ ಪಟ್ಟಿಯಲ್ಲಿ ಕೆಎಸ್‍ಸಿಎ ಅಧ್ಯಕ್ಷ ರೋಜರ್ ಬಿನ್ನಿ ಹೆಸರು ಕಾಣಿಸಿಕೊಂಡಿರುವುದು ಇನ್ನಷ್ಟು ಅನುಮಾನ ಮೂಡಿಸಿದೆ. ಇದನ್ನೂ ಓದಿ: ಗೂಳಿಗಳ ಗುದ್ದಿಗೆ ಟೈಟಾನ್ಸ್ ಪಲ್ಟಿ
Advertisement
Advertisement
ಅ. 18ಕ್ಕೆ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೋ, ಅವರೇ ಚುನಾವಣೆಗೆ ಸ್ಪರ್ಧಿಸಲು ಸಾಧ್ಯ. ಈಗಿನ ನಿಯಮಗಳ ಪ್ರಕಾರ ಒಂದು ರಾಜ್ಯಸಂಸ್ಥೆಯಿಂದ ಒಬ್ಬರು ಮಾತ್ರ ಪಾಲ್ಗೊಳ್ಳಲು ಸಾಧ್ಯ. ಈ ಸಭೆಯಲ್ಲಿ ಸ್ವತಃ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಪ.ಬಂಗಾಲ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಎಲ್ಲಾ ಮಾಹಿತಿಗಳನ್ನು ಗಮನಿಸುತ್ತಿದ್ದಂತೆ ಬಿನ್ನಿಗೆ ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ
Advertisement
ಮೂಲಗಳ ಪ್ರಕಾರ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧ್ಯಕ್ಷ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅ. 11 ಮತ್ತು 12ರಂದು ನಾಮಪತ್ರ ಸಲ್ಲಿಸಬಹುದಾಗಿದೆ. ಅ. 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ. 14ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದ್ದು, ಅಕ್ಟೋಬರ್ 18ರಂದು ಮುಂಬೈನಲ್ಲಿ ಚುನಾವಣೆ ನಡೆಯಲಿದೆ.