ಬೆಂಗಳೂರು: ಮದಕರಿ ನಾಯಕನ ಚಿತ್ರದ ಕುರಿತಾಗಿ ಎದ್ದಿರುವ ಚರ್ಚೆಯನ್ನು ನಿಲ್ಲಿಸುವಂತೆ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಗೂಗಲ್ ಪ್ಲಸ್ ನಲ್ಲಿ ಅಭಿಮಾನಿಗಳಿಗೆ ಪತ್ರ ಬರೆದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ವಿಷಯ ಸರಳವಾಗಿದೆ. ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನಿಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನಿಮಾ ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಇದನ್ನು ಓದಿ: ಸ್ಯಾಂಡಲ್‍ವುಡ್‍ನಲ್ಲಿ ಜಾತಿ ಜಗಳ – ವೀರ ಮದಕರಿ ಸಿನಿಮಾಗೆ ಮತ್ತೊಂದು ಸಂಕಷ್ಟ!
Advertisement
Advertisement
ಪತ್ರದಲ್ಲಿ ಏನಿದೆ?
ಈಗ ಚಾನೆಲ್ಲುಗಳು ಹಾಗೂ ವೇದಿಕೆಗಳಲ್ಲಿ ಚರ್ಚೆಯ ವಿಷಯವಾಗಿರುವ ವಸ್ತು, ಚರ್ಚೆ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿರುವಂತಿದೆ. ವಿಷಯ ಸರಳವಾಗಿದೆ. ರಾಕ್ ಲೈನ್ ವೆಂಕಟೇಶ್ ಅವರು ತಮಗೆ ಇಷ್ಟವಿರುವ ಸಿನಿಮಾ ಮಾಡುತ್ತಿದ್ದಾರೆ. ನಾನು ಇಷ್ಟಪಟ್ಟು ಕನಸು ಕಂಡು ಮಾಡಬೇಕೆಂದಿರುವ ಸಿನಿಮಾ ನಾನು ಮುಂದುವರೆಸುತ್ತೇನೆ. ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಇದನ್ನು ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ
Advertisement
ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ. ಕ್ರಿಯಾಶೀಲ ಕೆಲಸಗಳಲ್ಲಿ ಎಂದೂ ಜಾತಿಯ ಯೋಚನೆಗಳು ಬರುವುದಿಲ್ಲ, ಬರಕೂಡದು. ಸ್ವಾಮೀಜಿಗಳು, ರಾಕ್ ಲೈನ್ ವೆಂಕಟೇಶ್ ರವರು ಹಾಗು ಚಾನೆಲ್ ರವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ಇದು ನನಗೆ ಚರ್ಚೆಯ ವಿಷಯವೇ ಅಲ್ಲ. ನನ್ನ ಹಿಂದಿನ ಪತ್ರದಲ್ಲೂ ಇದನ್ನು ಸ್ಪಷ್ಟಪಡಿಸಿದ್ದೇನೆ. ಇದನ್ನು ಓದಿ: ವೀರ ಮದಕರಿ ಕಿಚ್ಚ ವೀರ ಸಿಂಧೂರ ಲಕ್ಷ್ಮಣನಾಗೋ ಸೂಚನೆ!
Advertisement
ಸಿನಿಮಾ ಮಾಡುವುದೇ ಪ್ರೇಕ್ಷಕರಿಗಾಗಿ. ಎರಡೂ ಸಿನಿಮಾಗಳನ್ನು ಅವರಿಗೆ ಕೊಡುಗೆ ಕೊಡೋಣ. ಎರಡೂ ಚಿತ್ರಗಳು ಚರಿತ್ರೆಯ ಆ ಮಹಾಪುರುಷನಿಗೆ ಗೌರವ ಸಲ್ಲಿಸಲಿ. ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ಏರಡು ಚಿತ್ರಗಳು ಮಾಡಿ ಅವರಿಗೆ ಗೌರವಿಸೋಣ.
ಗಮನ ಹರಿಸಲು ಇದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರ ಸಮಸ್ಯೆಗಳು ಬಹಳಷ್ಟಿವೆ. ಇದಕ್ಕೆ ಹರಿಬಿಟ್ಟ ಶಕ್ತಿ ಹಾಗು ಶ್ರಮ ಆ ಸಮಸ್ಯೆಗಳಿಗೆ ವ್ಯಯಿಸಿದರೆ ಎಲ್ಲರ ಜೀವನವು ಸ್ವಲ್ಪವಾದರೂ ಹಸನಾದೀತು. ಯೋಚನೆಗಳು ಯಾವಾಗಲೂ ಜನಪರವಾಗಿರಲೆಂದು ನನ್ನ ಈ ಎರಡು ಮಾತುಗಳೇ ಹೊರತು ಯಾರ ಮನಸನ್ನು ನೋಯಿಸಲು ಅಲ್ಲ. ಇದನ್ನು ಓದಿ: ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?
This request also applies to my frnz n fans ,,, that this debate itslf isn’t required.
let Cinema be Cinema and let everyone have faith in cinema. Cinema by itslf is a beautiful religion bringing every one under one roof.
My best wishes again to Rockline sir n team. https://t.co/VdiZ1ajW5u
— Kichcha Sudeepa (@KicchaSudeep) October 10, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv