ರಾಕಿಂಗ್ ಸ್ಟಾರ್ ಯಶ್ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಯಶ್ ನಟಿಸಿ, ನಿರ್ಮಾಣ ಮಾಡಿರುವ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೇ ಬರುತ್ತಿದ್ದಾರೆ ಯಶ್. ಇದೀಗ ಟಾಕ್ಸಿಕ್ ಡಿಸೆಂಬರ್ ನಲ್ಲಿ ಬರಲಿದೆ ಅಂತ ಹೇಳಲಾಗುತ್ತಿದೆ. ಈ ಮಧ್ಯ ಯಶ್ ಅಮೆರಿಕಾಗೆ ಹಾರಿದ್ದಾರೆ.
ಟಾಕ್ಸಿಕ್ ಮತ್ತು ರಾಮಾಯಣ ಚಿತ್ರಗಳ ಕೆಲಸಗಳಿಂದಾಗಿ ಬೆಂಗಳೂರಿನಿಂದ ಮುಂಬೈಗೆ ನೆಲೆಗೊಂಡಿದ್ದರು ಯಶ್, ಇದೀಗ ಟಾಕ್ಸಿಕ್ ವ್ಯಾಪಾರಕ್ಕಾಗಿ ಮುಂಬೈನಿಂದ ಅಮೆರಿಕಾಗೆ ಶಿಫ್ಟ್ ಆಗಿದ್ದಾರೆ. ಬರೋಬ್ಬರಿ ಇಪ್ಪತ್ತು ದಿನಗಳ ಕಾಲ ಯಶ್ ಅಮೆರಿಕಾ ಪ್ರವಾಸದಲ್ಲಿ ಇರಲಿದ್ದಾರೆ. ಇಪ್ಪತ್ತು ದಿನಗಳ ಕಾಲ ಹಾಲಿವುಡ್ ನಲ್ಲಿ ಟಾಕ್ಸಿಕ್ ಸಿನಿಮಾದ ವ್ಯಾಪಾರದಲ್ಲಿ ತೊಡಗಲಿದ್ದಾರೆ.ಇದನ್ನೂ ಓದಿ: ನಾನು ಇಂಡಸ್ಟ್ರಿ ತೊರೆದಿಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಅನಿಲ್ ಕಪೂರ್ ಪುತ್ರ
ಸಾವಿರಾರು ಕೋಟಿ ಗುರಿಯನ್ನಿಟ್ಟುಕೊಂಡು ಟಾಕ್ಸಿಕ್ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಭಾರೀ ಪ್ರಮಾಣದ ಹಣವೇ ಬಾಕ್ಸ್ ಆಫೀಸಿಗೆ ಹರಿದು ಬರಬೇಕು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಈ ಸಿನಿಮಾ ಏಕಕಾಲಕ್ಕೆ ನಿರ್ಮಾಣ ಆಗಿದ್ದರಿಂದ, ಇಂಗ್ಲಿಷ್ ಸಿನಿಮಾವನ್ನು ಹಾಲಿವುಡ್ ಗೆ ಮಾರಲು ಸಂಕಲ್ಪ ಮಾಡಿದ್ದಾರೆ. ಇದೆಲ್ಲವನ್ನೂ ಪ್ಲ್ಯಾನ್ ಮಾಡಿಕೊಂಡೇ ಅವರು ಅಮೆರಿಕಾಗೆ ಹಾರಿದ್ದಾರೆ.
ಟಾಕ್ಸಿಕ್ ಈಗಾಗಲೇ ಕುತೂಹಲ ಮೂಡಿಸಿದೆ. ಎರಡೆರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಿದ್ದರಿಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಈ ನಿರಾಸೆಯನ್ನು ಸಿನಿಮಾ ಕಳೆಯಲಿದೆ ಅಂತ ಹೇಳಲಾಗುತ್ತಿದೆ.ಇದನ್ನೂ ಓದಿ: ಕರ್ನಾಟಕದಲ್ಲೇ ಜನನಾಯಗನ್‌ಗೆ ಸಂಕಷ್ಟ
