ಎಂ.ಬಿ ಪಾಟೀಲ್ ಪರ ಯಶ್ ಮತ ಪ್ರಚಾರ

Public TV
3 Min Read
YASH MB PATIL

ವಿಜಯಪುರ: ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಪರವಾಗಿ ಸ್ಯಾಂಡಲ್‍ವುಡ್ ನಟ ಯಶ್ ಪ್ರಚಾರ ನಡೆಸಿದ್ದಾರೆ.

ತಿಕೋಟಾದಲ್ಲಿ ರೋಡ್ ಶೋ ಮೂಲಕ ತೆರೆದ ವಾಹನದಲ್ಲಿ ಆಗಮಿಸಿ ಬಹಿರಂಗ ಸಭೆಯಲ್ಲಿ ಎಂ.ಬಿ ಪಾಟೀಲ್ ಪರ ಮತಯಾಚನೆ ಮಾಡಿದ್ದಾರೆ. ಎಂ.ಬಿ ಪಾಟೀಲ್ ಒಬ್ಬರು ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಂಡಿದ್ದರು. ಅವರ ಕೋಟಿ ವೃಕ್ಷ ಅಭಿಯಾನದ ಕನಸಲ್ಲಿ ನಾನು ಕೂಡಾ ಒಬ್ಬ ಬ್ರ್ಯಾಂಡ್ ರಾಯಭಾರಿ. ಈಗಾಗಲೇ 30-35 ಲಕ್ಷ ಮರಗಳನ್ನು ಬೆಳೆಸಿದ್ದಾರೆ. ಇನ್ನು ಅವರ ಕೋಟಿ ವೃಕ್ಷ ಅಭಿಯಾನ ಮುಂದುವರೆದಿದೆ ಎಂದರು.

ಎಂಬಿ ಪಾಟೀಲ್ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯೂತ್ತಿದ್ದಾರೆ. ಅವರಿಗೆ ನೀವು ಈ ಬಾರಿ ಮತ ನೀಡಿ ಗೆಲ್ಲಿಸಬೇಕು ಎಂದು ಯಶ್ ಮನವಿ ಮಾಡಿದರು. ಇದನ್ನೂ ಓದಿ: ಬಾದಾಮಿ ಕ್ಷೇತ್ರಕ್ಕೆ ಸಿಎಂ ಪರವಾಗಿ ಮತಯಾಚನೆ ಮಾಡಲು ನಾನು ಹೋಗಲ್ಲ: ಯಶ್

BIJ YASH 2

ಎಂ.ಬಿ ಪಾಟೀಲ್ ಅವರು ಆತ್ಮೀಯ ಸ್ನೇಹಿತರು. ಯಶೋ ಮಾರ್ಗದ ಮೂಲಕ ಇಬ್ಬರು ಸೇರಿ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಮತ್ತಷ್ಟು ನೀರಾವರಿ ಎಲ್ಲ ಯೋಜನೆಗಳು ಶೀರ್ಘದಲ್ಲಿ ಜಾರಿಗೆ ಬರಲಿದೆ. ನೀರಾವರಿ ವಿಷಯಕ್ಕೆ ಸಂಬಂಧಪಟ್ಟಂತೆ ಸಚಿವ ಪಾಟೀಲ್ ಹಾಗೂ ನಾನು ಪರಸ್ಪರ ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ. ನನ್ನ ಗುರಿನೂ ಒಂದೇ ಸಚಿವ ಪಾಟೀಲ್ ಗುರಿನೂ ಒಂದೇ. ಬಾಕಿ ಉಳಿದಿರುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕು ಎಲ್ಲರಿಗೂ ನೀರು ಸಿಗುವ ಹಾಗೆ ಆಗಬೇಕು. 5 ವರ್ಷದಲ್ಲಿ ಒಂದು ಕೋಟಿ ಗಿಡ ನೆಡಬೇಕೆಂಬ ಗುರಿಯನ್ನು ಎಂ.ಬಿ ಪಾಟೀಲ್ ಇಟ್ಟುಕೊಂಡಿದ್ದಾರೆ. ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಾಕಷ್ಟು ಜ್ಞಾನ ಅವರಿಗೆ ಇದೆ ಎಂದು ಯಶ್ ಎಂ.ಬಿ ಪಾಟೀಲ್ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ ಅಂದ್ರು ನಟ ಯಶ್

ಪಾಟೀಲ್ ಅವರು ಹಾರ್ಡ್ ವರ್ಕಿಂಗ್ ಪರ್ಸನ್. ಹಾಗಾಗಿ ನನ್ನ ಬೆಂಬಲ ಅವರಿಗೆ ಇದೆ. ದೊಡ್ಡ ಮಟ್ಟದಲ್ಲಿ ಸಚಿವ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬರ್ತಾರೆಂಬ ನಂಬಿಕೆ ನನಗಿದೆ. ಅಭ್ಯರ್ಥಿ ಪರ ಪ್ರಚಾರ ಮಾಡೋದರಿಂದ ನನ್ನ ಇಮೇಜ್ ಹಾಳಾಗುತ್ತೆಂದು ನಾ ಯಾವತ್ತು ಅಂದುಕೊಂಡಿಲ್ಲ. ಜನಗಳಿಂದ ನಾವು. ನಮಗೆ ರಾಜಕೀಯ ಕ್ಷೇತ್ರದಲ್ಲಿ ಒಂದಿಷ್ಟು ಸ್ನೇಹಿತರಿದ್ದಾರೆ. ನನಗೊಂದಿಷ್ಟು ಗುರಿಯಿದೆ. ಹಾಗಾಗಿ ನನ್ನಿಂದ ನಮ್ಮ ಸ್ನೇಹಿತರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಸಮಯವನ್ನು ಎಂ.ಬಿ ಪಾಟೀಲ್‍ರಿಗೆ ಮೀಸಲಿಟ್ಡಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ನಾನು ಅವರ ಬೆನ್ನಿಗೆ ನಿಂತರೆ ನಮ್ಮ ಸ್ನೇಹಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

MB PATIL

ಚಿತ್ರನಟರಿಂದ ನಡೆಸುವ ಪ್ರಚಾರದಿಂದ ದೊಡ್ಡ ಮಟ್ಟದ ಬದಲಾವಣೆ ಆಗಲ್ಲ ಎಂಬ ಹೆಚ್‍ಡಿಕೆ ಹೇಳಿಕೆಗೆ ಯಶ್, ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಎಂಜನೀಯರ್ ಇದ್ದಾರೆ. ಅವರಿಗೆ ಹಾಗೆ ಅನಿಸಿದರೆ ನಿಜ ಇರಬೇಕು. ನಾನೇನೋ ಪರಿಣಾಮ ಬೀರಿಬಿಡುತ್ತೇನೆ ಎಂದು ನಾನು ಅಂದುಕೊಂಡಿಲ್ಲ. ಯಾವುದೇ ಪಕ್ಷದ ಪರ ನಾನು ಹೋಗಿಲ್ಲ. ಯಾರು ನನಗೆ ಕರಿತಾರೆ ಅಲ್ಲಿ ಹೋಗುತ್ತೇನೆ. ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಹಾಗೇನಾದರೂ ಹೇಳಿದರೆ ಈ ಬಾರಿಯ ಚುನಾವಣೆಗೆ ನಿಂತುಕೊಂಡು ಬಿಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

ಮುಂದೆ ಮಾನಪ್ಪ ವಜ್ಜಲ್ ಪರ ಹಾಗೂ ಮತ್ತಿಬ್ಬರು ಕರೆದಿದ್ದಾರೆ. ಅವರ ಪರ ಮತಯಾಚನೆಗೆ ನಾನು ಹೋಗುತ್ತಿದ್ದೇನೆ. ಯಾರು ಜನರ ಪರ ಇದ್ದಾರೊ ಅವರ ನಿಶ್ಚಿತವಾಗಿ ಗೆದ್ದೆ ಗೆಲ್ತಾರೆ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಜನ ಮತ ಹಾಕ್ತಾರೆ. ನಾವು ಬಂದು ಗೆಲ್ಲಿಸಿ ಬಿಡುತ್ತೇವೆ ನಾವು ಬಂದು ಏನೋ ಮಾಡಿ ಬಿಡುತ್ತೇವೆ ಎನ್ನುವುದು ಸುಳ್ಳು ಎಂದು ಯಶ್ ಹೇಳಿದ್ದರು. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

Share This Article
Leave a Comment

Leave a Reply

Your email address will not be published. Required fields are marked *