ವಿಜಯಪುರ: ಬಾದಾಮಿ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಪರವಾಗಿ ಮತಯಾಚನೆ ಮಾಡಲು ನಾನು ಹೋಗುವುದಿಲ್ಲ. ಆ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ ಎಂದು ರಾಂಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ವಿಜಯಪುರದ ತಿಕೋಟಾದಲ್ಲಿ ಮಾತನಾಡಿದ ಯಶ್, ಜಿದ್ದಾಜಿದ್ದನ ಕ್ಷೇತ್ರದಲ್ಲಿ ನಾವು ಹೋಗಿ ಏನು ಮಾಡುವಂತಿಲ್ಲ. ರಾಜಕೀಯ ರಾಜಕೀಯವಾಗಿ ನಡೆಯಬೇಕು ಎಂದರು. ಇನ್ನು ಜನ ಯಾರನ್ನು ಪ್ರೀತಿಸಿ ಗೆಲ್ಲಿಸ್ತಾರೆ ಅವರೇ ಆಯ್ಕೆ ಆಗುತ್ತಾರೆ. ನಾನು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ ಅಂದ್ರು ನಟ ಯಶ್
Advertisement
Advertisement
ಅಲ್ಲದೇ ರಾಜಕೀಯ ಸ್ನೇಹಿತರು ಅವರಾಗಿ ಕರೆದಿದ್ದಾರೆ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಸಚಿವ ಎಂ.ಬಿ. ಪಾಟೀಲ್ ನನ್ನ ಫ್ಯಾಮಿಲಿ ಫ್ರೆಂಡ್. ಅದಕ್ಕಾಗಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಇನ್ನು ಎರಡು ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಯಶ್ ತಿಳಿಸಿದರು. ಇದನ್ನೂ ಓದಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್
Advertisement
ಬಾದಾಮಿಯಲ್ಲಿ ನಾನು ಪ್ರಚಾರಕ್ಕೆ ಹೋಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀರಾಮಲು ಅವರ ಪರಿಚಯ ನನಗಿದೆ. ಇವರಿಬ್ಬರು ಪರಿಚಯವಿರುವ ಕ್ಷೇತ್ರ ಹಾಗೂ ಜಿದ್ದಾಜಿದ್ದಿ ಕ್ಷೇತ್ರಗಳಿಗೆ ನಾನು ಹೋಗುವುದಿಲ್ಲ. ಅಲ್ಲಿ ನಾನು ಮಾಡುವಂಥದ್ದು ಏನೂ ಇರಲ್ಲ. ರಾಜಕೀಯವಾಗಿ ವಾತಾವರಣ ಸರಿಯಿಲ್ಲದ ಕ್ಷೇತ್ರಗಳಿಗೆ ನಾನು ಹೋಗಲ್ಲ ಎಂದು ಯಶ್ ಬಾದಾಮಿ ಕ್ಷೇತ್ರದ ಪ್ರಚಾರದ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!