Connect with us

ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

ಧಾರವಾಡ: ಜಿಲ್ಲೆಯ ಅರಣ್ಯ ಇಲಾಖೆ ಅಂತರಾಜ್ಯ ಶ್ರೀಗಂಧ ಕಳ್ಳರ ತಂಡವನ್ನು ಬೇಧಿಸಿ 4 ಮಂದಿಯನ್ನು ಬಂಧಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಶ್ರೀಗಂಧ ಹಾಗೂ ವನ್ಯ ಜೀವಿ ಸಂಪತ್ತಿಗೆ ಕನ್ನ ಹಾಕುತ್ತಿದ್ದ 20 ಜನರ ಈ ಕಳ್ಳರ ತಂಡ, ಮಧ್ಯಪ್ರದೇಶದಿಂದ ರಾಜ್ಯಕ್ಕೆ ಗುಡಿ ಕೈಗಾರಿಕಾ ವಸ್ತುಗಳ ಮಾರಾಟ ವೇಶದಲ್ಲಿ ಬಂದಿದ್ದರು. ಸದ್ಯ ಧಾರವಾಡ ಅರಣ್ಯ ಇಲಾಖೆ 4 ಮಹಿಳೆಯರನ್ನು ಬಂಧಿಸಿದ್ದು, ಉಳಿದ 16 ಜನರ ಬಂಧನಕ್ಕೆ ಜಾಲ ಬಿಸಿದೆ.

ಧಾರವಾಡ ಜಿಲ್ಲೆಯ ತೋಟದ ಮನೆಯ ಸಿಸಿಟಿವಿಯಲ್ಲಿ ಈ ಕಳ್ಳರ ಓಡಾಟ ಎಲ್ಲಾ ಸೆರೆಯಾಗಿದೆ. ಬಂಧನಕ್ಕೆ ಒಳಗಾದವರಲ್ಲಿ ಅಧೂರಿ ಠಾಕೂರ್, ಪುಂಜಿ ಆದಿವಾಸಿ, ಗರ್ಮಾಬಾಯಿ ಹಾಗೂ ಜಾಮುಂಡಿ ಆದಿವಾಸಿ ಎಂಬ ಮಹಿಳೆಯರಿದ್ದು, ಅವರಿಂದ ಒಟ್ಟು 9 ಕೆಜಿ ಶ್ರೀಗಂಧ ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.

ಸದ್ಯ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement
Advertisement