Connect with us

Cinema

100 ಕೋಟಿ ರೂ. ಕಲೆಕ್ಷನ್ :’ಭರತ್ ಅನೆ ನೇನು’ ಭರ್ಜರಿ ಪ್ರತಿಕ್ರಿಯೆ

Published

on

ಹೈದರಾಬಾದ್: ಟಾಲಿವುಡ್ ನಲ್ಲಿ ಸಂಚಲನ ಮೂಡಿಸುತ್ತಿರುವ ಸಿನಿಮಾ ‘ಭರತ್ ಅನೆ ನೇನು’. ಶುಕ್ರವಾರ ಚಿತ್ರ ಬಿಡುಗಡೆ ಆಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ನಟ ಜೂನಿಯರ್.ಎನ್‍ಟಿಆರ್ ಸಹ ಭರತ್ ಅನೆ ನೇನು ಸಿನಿಮಾ ನೋಡಿ ಮೆಚ್ಚುಗೆಯನ್ನು ತಿಳಿಸಿದ್ದಾರೆ.

ಮಹೇಶ್ ಬಾಬು ನಟನೆ ಉತ್ತಮವಾಗಿದ್ದು, ಚಿತ್ರ ಪರದೆಯ ಮೇಲೆ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ಪಾತ್ರಗಳು ಮತ್ತು ದೃಶ್ಯಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಸರಳ ರೀತಿಯಲ್ಲಿ ತಿಳಿಸಲಾಗಿದೆ. ಚಿತ್ರದ ಬಹುತೇಕ ಎಲ್ಲ ದೃಶ್ಯಗಳು ಅತ್ಯದ್ಭುತವಾಗಿ ಮೂಡಿಬಂದಿದೆ. ಇಂತಹ ಸಿನಿಮಾ ನೀಡಿದ ಕೊರಟಾಲ ಶಿವ, ಮಹೇಶ್ ಬಾಬು ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಂತಾ ರಾಜಮೌಳಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಈ ಐದು ಕಾರಣಗಳಿಗಾಗಿ ‘ಭರತ್ ಅನೆ ನೇನು’ ಚಿತ್ರವನ್ನು ನೋಡಬೇಕೆಂದು ಮಹೇಶ್ ಬಾಬು ಅಭಿಮಾನಿಗಳು ಹೇಳುತ್ತಿದ್ದಾರೆ

ಇತ್ತ ಭರತ್ ಅನೆ ನೇನು ಸಿನಿಮಾ ನೋಡಿದ ಮೇಲೆ ಜೂ.ಎನ್‍ಟಿಆರ್ ಸಹ ಟ್ವೀಟ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಭರತ್ ಅನೆ ನೇನು ಚಿತ್ರತಂಡಕ್ಕೆ ನನ್ನ ಶುಭಾಶಯಗಳು. ಪ್ರಾಮಾಣಿಕ ಕಥೆಯುಳ್ಳ ಎವರ್ ಗ್ರೀನ್ ಸಿನಿಮಾ ನೀಡಿದ ನಿಮಗೆಲ್ಲರಿಗೂ ಧನ್ಯವಾದ ಅಂತಾ ಟ್ವೀಟ್ ಮಾಡಿದ್ದಾರೆ.

ಕೊರಟಾಲ ಶಿವ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಮಹೇಶ್ ಬಾಬುಗೆ ಜೊತೆಯಾಗಿ ಬಾಲಿವುಡ್ ಚೆಲುವೆ ಕೈರಾ ಅದ್ವಾನಿ ನಟಿಸಿದ್ದಾರೆ. ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ. ರಾಮ್‍ಚರಣ್ ಅಭಿನಯದ `ರಂಗಸ್ಥಳಂ’ ಸಿನಿಮಾಗೂ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದರು.

ಈ ವರ್ಷ ವಿದೇಶದಲ್ಲಿ ಬಿಡುಗಡೆಯಾದ ಭಾರತೀಯ ಸಿನಿಮಾಗಳ ಟಾಪ್ 5ರಲ್ಲಿ ಎರಡನೇ ಸ್ಥಾನವನ್ನು ಭರತ್ ಅನೆ ನೇನು ಹೊಂದಿದೆ. ಮೊದಲ ಸ್ಥಾನವನ್ನು ಬಾಲಿವುಡ್ `ಪದ್ಮಾವತ್’ ಹೊಂದಿದೆ.

Click to comment

Leave a Reply

Your email address will not be published. Required fields are marked *