ಹೈದರಾಬಾದ್: ಶಿವ ದೇವಾಲಯಕ್ಕೆ ಹೊರಟಿದ್ದ ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 12 ಮಂದಿಯ ಪೈಕಿ ಐವರು ನದಿಗೆ ಬಿದ್ದು ಕಣ್ಣರೆಯಾಗಿದ್ದಾರೆ. ಅಲ್ಲದೆ ರಕ್ಷಿಸಲ್ಪಟ್ಟ 7 ಮಂದಿಯಲ್ಲಿ ಬಾಲಕಿಯೋರ್ವಳು ಅಸುನೀಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಗುರುವಾರ ರಾತ್ರಿ ವೇಳೆ ಸೇತುವೆ ಮೇಲೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಆಟೋ ರಿಕ್ಷಾ ನದಿಗೆ ಬಿದ್ದಿದ್ದು, ಬಾಲಕಿ ಸಾವನ್ನಪ್ಪಿದ್ದು, ಐವರು ಕಣ್ಮರೆಯಾಗಿದ್ದಾರೆ. ಇದನ್ನೂ ಓದಿ: ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್ಕಮ್ ನೋಟ್
Advertisement
Advertisement
ಸುಮಾರು 12 ಮಂದಿ ಆತ್ಮಕೂರ್ ಪಟ್ಟಣದಿಂದ ಸಮೀಪದ ಶಿವ ದೇವಾಲಯಕ್ಕೆ ವಿಶೇಷ ಪೂಜೆಗೆಂದು ಆಟೋದಲ್ಲಿ ತೆರಳುತ್ತಿದ್ದರು. ರಾತ್ರಿ 9.30ರ ಸುಮಾರಿಗೆ ನೆಲ್ಲೂರಿನ ಸಂಗೆಮ್ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿದ್ದ 12 ಜನರಲ್ಲಿ 7 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಅವರಲ್ಲಿ ಒಬ್ಬ ಬಾಲಕಿ ಮೃತಪಟ್ಟಿದ್ದಾಳೆ. ಆಟೋದಲ್ಲಿದ್ದ ಉಳಿದ ಐವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲೂ ಪ್ರಸಾದ್ ಪುತ್ರ
Advertisement
Advertisement
6 ಮಂದಿಯನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಏಳು ಜನರನ್ನು ರಕ್ಷಿಸಿದ್ದರು. ಇತರರು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ. ರಾತ್ರಿಯಾಗಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡಚಣೆಯುಂಟಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.