InternationalLatestMain Post

ನಾನು ಪ್ರಧಾನಿಯಾದರೆ 30 ಚೀನಾ ಸಂಸ್ಥೆ ಮುಚ್ಚುತ್ತೇನೆ: ರಿಷಿ ಸುನಕ್

Advertisements

ಲಂಡನ್: ಬ್ರಿಟನ್‍ನ ಮುಂದಿನ ಪ್ರಧಾನಿಯಾದರೆ ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ ಹಾಗೂ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಭರವಸೆ ನೀಡಿದರು.

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರ ಪ್ರತಿಸ್ಪರ್ಧಿ ಚೀನಾ, ರಷ್ಯಾ ವಿಚಾರದಲ್ಲಿ ರಿಷಿ ಸುನಕ್ ದುರ್ಬಲಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಏಷ್ಯಾದ ಸೂಪರ್ ಪವರ್ ದೇಶವು ದೇಶೀಯವಾಗಿ ಮತ್ತು ಜಾಗತಿಕ ಭದ್ರತೆಗೆ ನಂಬರ್ ಒನ್ ಬೆದರಿಕೆಯಾಗಿದೆ ಎಂದ ಅವರು, ಬ್ರಿಟನ್‍ನಲ್ಲಿರುವ ಎಲ್ಲಾ 30 ಚೀನಾದ ಸಂಸ್ಥೆಗಳನ್ನು ಮುಚ್ಚುತ್ತೇವೆ. ಇದರಿಂದಾಗಿ ಚೀನಿ ಸಂಸ್ಕೃತಿ ಹಾಗೂ ಭಾಷಾ ಪ್ರಭಾವ ಹರಡುವುದನ್ನು ತಡೆಯುತ್ತೇವೆ ಎಂದರು.

ಬ್ರಿಟನ್‍ನ ದೇಶೀಯ ಬೇಹುಗಾರಿಕೆ ಸಂಸ್ಥೆಯು ಚೀನೀ ಬೇಹುಗಾರಿಕೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಜೊತೆಗೆ ಸೈಬರ್‌ ಸ್ಪೇಸ್‍ನಲ್ಲಿ ಚೀನಾದ ಬೆದರಿಕೆಗಳನ್ನು ನಿಭಾಯಿಸಲು ನ್ಯಾಟೋ ಶೈಲಿಯ ಅಂತಾರಾಷ್ಟ್ರೀಯ ಸಹಕಾರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಚೀನಾವು ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಹಾಗೂ ನಮ್ಮ ವಿಶ್ವವಿದ್ಯಾನಿಲಯಗಳಿಗೆ ನುಸುಳುತ್ತಿದೆ. ಅಷ್ಟೇ ಅಲ್ಲದೇ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ವಿದೇಶದಲ್ಲಿ ವ್ಲಾಡಿಮಿರ್ ಪುಟಿನ್ ಅವರಿಗೆ ಆಸರೆ ಆಗಿದ್ದಾರೆ. ಜೊತೆಗೆ ತೈವಾನ್ ಸೇರಿದಂತೆ ನೆರೆಹೊರೆಯವರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಇದನ್ನೂ ಓದಿ: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿ ಭೀಕರ ಅಪಘಾತ: ಸ್ವಗ್ರಾಮಕ್ಕೆ ಆಗಮಿಸಿದ ಪಿಎಸ್‍ಐ ಮೃತದೇಹ

ಚೀನಾದ ಸರ್ಕಾರಿ ಗ್ಲೋಬಲ್ ಟೈಮ್ಸ್ ಈ ಹಿಂದೆ ಯುಕೆ-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನವನ್ನು ಹೊಂದಿರುವ ಏಕೈಕ ಅಭ್ಯರ್ಥಿ ರಿಷಿಕ್ ಸುನಕ್ ಎಂದು ಹೇಳಿತ್ತು. ಇದನ್ನೂ ಓದಿ:  ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್

Live Tv

Leave a Reply

Your email address will not be published.

Back to top button