ಬೀದರ್: ಗಾಂಜಾ ಗ್ಯಾಂಗ್ ಹಿಡಿಯಲು ಹೋಗಿದ್ದಾಗ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಬೀದರ್ ಮೂಲದ ಪಿಎಸ್‍ಐ ಮೃತದೇಹ ಇಂದು ಸ್ವ-ಗ್ರಾಮ ತಲುಪಿದೆ.
Advertisement
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಸ್ವ-ಗ್ರಾಮಕ್ಕೆ ಪಿಎಸ್‍ಐ ಅವಿನಾಶ್ ಯಾದವ್ ಮೃತದೇಹ ತಲುಪಿದೆ. ಆಂಧ್ರಪ್ರದೇಶದ ಚಿತ್ತೂರಿನಿಂದ ಆ್ಯಂಬುಲೇನ್ಸ್ ಮೂಲಕ ಸ್ವ-ಗ್ರಾಮಕ್ಕೆ ಮೃತದೇಹ ಇಂದು ತರಲಾಗಿದ್ದು, ಗ್ರಾಮಕ್ಕೆ ಪಿಎಸ್‍ಐ ಮೃತದೇಹ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಇದನ್ನೂ ಓದಿ: ಗೂಗಲ್ ಕೋ-ಫೌಂಡರ್ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಮಸ್ಕ್
Advertisement
Advertisement
ದಾಸರವಾಡಿ ಗ್ರಾಮದ ನಿವಾಸದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ದಾಸರವಾಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇಂದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜನರು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಗ್ರಾಮದ ಜಮೀನಿನಲ್ಲಿ ಯಾದವ್ ಸಂಪ್ರದಾಯದಂತೆ ಪಿಎಸ್‍ಐ ಅಂತ್ಯಕ್ರಿಯೆ ನಡೆಯಲಿದೆ.