ಮುಂಬೈ: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‍ನಲ್ಲಿ 100 ಕ್ಯಾಚ್ ಹಿಡಿದ ಭಾರತದ ನಾಲ್ಕನೇ ಆಟಗಾರ ಎಂಬ ನೂತನ ಮೈಲಿಗಲ್ಲು ನೆಟ್ಟಿದ್ದಾರೆ.
Advertisement
ಜೋಹನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಲುಂಗಿ ಎನ್‍ಗಿಡಿ ಅವರ ಕ್ಯಾಚ್ ಪಡೆಯುವ ಮೂಲಕ ಪಂತ್ ಈ ಸಾಧನೆ ಮಾಡಿ ಧೋನಿ ಜೊತೆ ಸಾಧಕರ ಪಟ್ಟಿಗೆ ಸೇರ್ಪಡೆಗೊಂಡರು. ಧೋನಿ 256 ಕ್ಯಾಚ್ ಪಡೆದು ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಅವರ ಬಳಿಕ 160 ಕ್ಯಾಚ್ ಪಡೆದಿರುವ ಸಯ್ಯದ್ ಕಿರ್ಮಾನಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಶಾರ್ದೂಲ್ ಶಾಕ್ – ಭಾರತಕ್ಕೆ ಅಲ್ಪ ಮುನ್ನಡೆ
Advertisement
Advertisement
ಕಿರಣ್ ಮೋರೆ 110 ಕ್ಯಾಚ್ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಇದೀಗ ಪಂತ್ 100 ಕ್ಯಾಚ್ ಪಡೆದು ಈ ಸಾಧಕರ ಪಟ್ಟಿಗೆ ಎಂಟ್ರಿಕೊಟ್ಟಿದ್ದಾರೆ. ಪಂತ್ ಸೆಂಚುರಿಯನ್ ಟೆಸ್ಟ್‌ನಲ್ಲಿ ಅತೀ ವೇಗವಾಗಿ 100 ಬಲಿ ಪಡೆದ ಭಾರತದ ವಿಕೆಟ್ ಕೀಪರ್ ಎಂಬ ದಾಖಲೆ ಬರೆದಿದ್ದರು. ಪಂತ್ 26 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಧೋನಿ 100 ಬಲಿ ಪಡೆಯಲು 36 ಪಂದ್ಯಗಳನ್ನು ಆಡಿದ್ದರು. ಇದನ್ನೂ ಓದಿ: ಪಂತ್ ವಿವಾದಾತ್ಮಕ ಕ್ಯಾಚ್ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
Advertisement
ಜೋಹನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 20 ಓವರ್‌ಗಳಲ್ಲಿ 85 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು 58 ರನ್‍ಗಳ ಮುನ್ನಡೆಯಲ್ಲಿದೆ. ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಚೇತೇಶ್ವರ ಪೂಜಾರ ಅಜೇಯ 35 ರನ್ (42 ಎಸೆತ, 7 ಬೌಂಡರಿ) ಮತ್ತು ಅಜಿಂಕ್ಯಾ ರಹಾನೆ 11 ರನ್ (22 ಎಸೆತ, 1 ಬೌಂಡರಿ) ಸಿಡಿಸಿ 3ನೇ ವಿಕೆಟ್‍ಗೆ 41 ರನ್ (52 ಎಸೆತ) ಜೊತೆಯಾಟವಾಡಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಆರ್ಸಿಬಿ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್