CricketLatestMain PostSports

ಆರ್​ಸಿಬಿ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್

ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ ಆಡುತ್ತಿರುವ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ಬಿಗ್‍ಬಾಶ್ ಟಿ20 ಲೀಗ್ ನಡೆಯುತ್ತಿದೆ. ಮಾಕ್ಸಿ, ಮೆಲ್ಬರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದಾರೆ. ನಿನ್ನೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಿದ ವೇಳೆ ಪಾಸಿಟಿವ್ ವರದಿಯಾಗಿದ್ದು, ಇದೀಗ ಆರ್​ಟಿಪಿಸಿಆರ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಮೆಲ್ಬರ್ನ್ ಸ್ಟಾರ್ಸ್ ತಂಡ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಆಫ್ರಿಕಾಗೆ ಶಾರ್ದೂಲ್ ಶಾಕ್ – ಭಾರತಕ್ಕೆ ಅಲ್ಪ ಮುನ್ನಡೆ

ಸದ್ಯ ಮಾಕ್ಸಿ ಹೋಟೆಲ್‍ನಲ್ಲಿ ಕ್ವಾರಂಟೈನ್ ಆಗಿದ್ದು ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಮೂಲಕ ಬಿಗ್‍ಬಾಶ್ ಟಿ20 ಲೀಗ್‍ನಲ್ಲಿ ಆಡುತ್ತಿರುವ ಮೆಲ್ಬರ್ನ್ ಸ್ಟಾರ್ಸ್ ತಂಡದ ಒಟ್ಟು 13 ಜನ ಆಟಗಾರರಲ್ಲಿ ಈಗಾಗಲೇ ಕೊರೊನಾ ಕಾಣಿಸಿಕೊಂಡಂತಾಗಿದೆ. ಈಗಾಗಲೇ ಬ್ರಿಸ್ಬೇನ್ ಹೀಟ್ ತಂಡ ಸೇರಿದಂತೆ ಹಲವು ತಂಡದ ಆಟಗಾರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಬಿಗ್‍ಬಾಶ್ ಲೀಗ್‍ನ ಮೂರು ಪಂದ್ಯಗಳನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಈ ನಡುವೆ ಟೂರ್ನಿ ರದ್ದಾಗುವ ಲಕ್ಷಣಗಳು ಕಾಣಿಸಿಕೊಂಡಿದೆ. ಇದನ್ನೂ ಓದಿ: ಪಂತ್ ವಿವಾದಾತ್ಮಕ ಕ್ಯಾಚ್ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

Leave a Reply

Your email address will not be published.

Back to top button