CricketLatestLeading NewsMain PostSports

ಪಂತ್ ವಿವಾದಾತ್ಮಕ ಕ್ಯಾಚ್ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

Advertisements

ಜೋಹನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ದಿನ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಹಿಡಿದ ಕ್ಯಾಚ್ ಒಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ದಕ್ಷಿಣ ಆಫ್ರಿಕಾ ಎರಡನೇ ದಿನ ಬ್ಯಾಟಿಂಗ್ ಬರುತ್ತಿದ್ದಂತೆ ಶಾರ್ದೂಲ್ ಠಾಕೂರ್ ವಿಕೆಟ್ ಬೇಟೆಯಾಡಲು ಆರಂಭಿಸಿದರು. ರಾಸ್ಸಿ ವ್ಯಾನ್‍ಡೆರ್ ಡಸೆನ್ಸ್ ಬ್ಯಾಟಿಂಗ್ ಮಾಡುತ್ತಿದ್ದಂತೆ ಠಾಕೂರ್ ಎಸೆದ ಬ್ಯಾಕ್ ಆಫ್ ಲೆಂಥ್ ಎಸೆತವನ್ನು ಬ್ಯಾಟ್‌ನಿಂದ ಟಚ್ ಮಾಡಿ ಕೀಪರ್ ಪಂತ್‍ಗೆ ಕ್ಯಾಚ್ ನೀಡಿದರು. ಆದರೆ ಪಂತ್ ಹಿಡಿದ ಕ್ಯಾಚ್ ನೆಲಕ್ಕೆ ಬಿದ್ದು ಪಿಚ್ ಆಗಿ ಕೈಗೆ ಬಂದಂತೆ ಕಾಣಿಸಿತು. ಆದರೆ ಅಂಪೈರ್ ಕ್ಯಾಚ್ ಔಟ್ ಎಂದು ನಿರ್ಧರಿಸಿದರು. ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಕನ್ನಡಿಗ ರಾಹುಲ್ ನಾಯಕ, ದ್ರಾವಿಡ್ ಕೋಚ್

ಪಂತ್ ಹಿಡಿದ ಕ್ಯಾಚ್‍ನಲ್ಲಿ ಚೆಂಡು ನೆಲಕ್ಕೆ ಬಡಿದಂತೆ ಕಾಣಿಸುತ್ತಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದು ನಾಟ್ ಔಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಅರಂಭಿಸಿದ್ದಾರೆ. ಈ ನಡುವೆ ಕೆಲ ನೆಟ್ಟಿಗರು ರಾಹುಲ್ ಕ್ಯಾಪ್ಟನ್ ಆಗಿ ರಾಸ್ಸಿ ವ್ಯಾನ್‍ಡೆರ್ ಡಸೆನ್ಸ್ ಅವರನ್ನು ಮತ್ತೆ ಬ್ಯಾಟಿಂಗ್ ಆಹ್ವಾನಿಸಬೇಕಿತ್ತು. ಈ ಹಿಂದೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಿವಾದಾತ್ಮಕವಾಗಿ ಔಟ್ ಆಗಿದ್ದ ಇಯಾನ್ ಬೆಲ್ ಅವರನ್ನು ಕರೆದು ಮತ್ತೆ ಬ್ಯಾಟಿಂಗ್ ಮುಂದುವರಿಸುವಂತೆ ಸೂಚಿಸಿದ್ದರು. ಇದೇ ರೀತಿ ರಾಹುಲ್ ಮಾಡಬಹುದಿತ್ತು. ಆದರೆ ರಾಹುಲ್ ಏನು ಮಾತನಾಡಲಿಲ್ಲ ಹಾಗಾಗಿ ಅಂಪೈರ್ ಅಸಹಾಯಕರಾದರು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಟೀಂ ಇಂಡಿಯಾ ಪರ ನೂತನ ಮೈಲಿಗಲ್ಲು ನೆಟ್ಟ ಶಮಿ, ಪಂತ್ ಸಂಭ್ರಮ

Leave a Reply

Your email address will not be published.

Back to top button