ಮುಂಬೈ: ಖ್ಯಾತ ಮರಳು ಕಲಾಕೃತಿಗಾರ ಸುದರ್ಶನ್ ಪಟ್ನಾಯಕ್ ಅವರು ದಿವಂಗತ ಲತಾ ಮಂಗೇಶ್ಕರ್ ಅವರಿಗೆ ಸುಂದರವಾದ ಮರಳು ಕಲಾಕೃತಿಯನ್ನು ಅರ್ಪಿಸಿದ್ದಾರೆ.
ಸಂಗೀತ ದಂತಕಥೆ ಲತಾ ಮಂಗೇಶ್ಕರ್ ಅವರ ಶಾಶ್ವತ ಸ್ಮರಣೆಯನ್ನು ಗೌರವಿಸಲು, ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‍ನಲ್ಲಿ ದಿವಂಗತ ಗಾಯಕಿಯ ಸುಂದರವಾದ ಮರಳು ಕಲಾಕೃತಿಯನ್ನು ರಚಿಸಿದ್ದಾರೆ. ಕಲಾಕೃತಿಯಲ್ಲಿ ಲತಾ ಮಂಗೇಶ್ಕರ್‍ಗೆ ಪಟ್ನಾಯಕ್ ಅವರು ಬಿಳಿ ಸೀರೆಯನ್ನುಡಿಸಿ ಸೀರೆಯ ಬಾರ್ಡರ್‌ಗೆ ಚಿನ್ನದ ಬಣ್ಣವನ್ನು ಬಳಿದಿದ್ದಾರೆ. ಸಂಗೀತಕ್ಕೆ ಸಂಬಂಧಿಸಿದ ಅಕ್ಷರಗಳೊಂದಿಗೆ ಲತಾ ಅವರ ಮೇಲೆ ಭಾರತದ ಧ್ವಜವನ್ನು ಹಾರಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?
Advertisement
????Meri Awaaz hi Pehechan hai????
Sand artist Sudarsan Pattnaik pays tribute to #NightingaleofIndia Lata Mangeshkar through his sand art at Puri beach in Odisha..#LataMangeshkar@sudarsansandpic.twitter.com/BvVvYll5kd
— PIB in Maharashtra ???????? (@PIBMumbai) February 7, 2022
Advertisement
ಕಲಾಕೃತಿಯ ಜೊತೆಗೆ, ಸುದರ್ಶನ್ ಅವರು “ಮೇರಿ ಆವಾಜ್ ಹೈ ಪೆಹೆಚಾನ್ ಹೈ” ಎಂದು ಬರೆದಿದ್ದು, ಇದು ಲತಾ ಅವರ ಧ್ವನಿಯ ಶಕ್ತಿಯನ್ನು ಸಂಕೇತಿಸುತ್ತದೆ. ಸುದರ್ಶನ್ ಪಟ್ನಾಯಕ್ ಅವರು 16 ವರ್ಷಗಳಿಂದ ತಮ್ಮ ಮರಳು ಕಲೆಯನ್ನು ರಚಿಸುತ್ತಿದ್ದಾರೆ. ಅವರ ಅನೇಕ ಮರಳು ಶಿಲ್ಪಗಳು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನಲ್ಲಿ ಸ್ಥಾನ ಪಡೆದಿವೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
Advertisement
ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರು ಜನವರಿಯಲ್ಲಿ ಕೋವಿಡ್ -19 ಮತ್ತು ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 8 ರಂದು, 92 ವರ್ಷ ವಯಸ್ಸಿನ ಗಾಯಕಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‍ನಿಂದ ಚೇತರಿಸಿಕೊಂಡ ನಂತರವೂ, ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Advertisement
ನಿನ್ನೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕೂಡ ಮುಂಬೈಗೆ ತೆರಳಿದ್ದರು.