ಪ್ಯಾರಿಸ್: ಫಿಫಾ ವಿಶ್ವಕಪ್ (FIFA World Cup 2026) ಮೂರನೇ ಟ್ರೋಫಿ ಎತ್ತಿಹಿಡಿಯುವ ಫ್ರಾನ್ಸ್ (France) ಕನಸು ಭಗ್ನವಾಗಿದೆ. ಮಂಗಳವಾರ ಮಧ್ಯರಾತ್ರಿ ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ & ಟಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಸೆಮಿಫೈನಲ್‌ನಲ್ಲಿ ಸ್ಪೇನ್ (Spain) ವಿರುದ್ಧ 2-0 ಅಂತರದಿಂದ ಫ್ರಾನ್ಸ್ ಸೋತು 2026 ರ ಟೂರ್ನಿಯಿಂದ ಹೊರಬಿದ್ದಿತು. ಸೋಲಿನ ನಂತರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದಂತೆ ಫ್ರಾನ್ಸ್‌ನಲ್ಲಿ ಗಲಭೆಗಳು ಭುಗಿಲೆದ್ದಿವೆ.
ಸೆಮಿಫೈನಲ್ ಪಂದ್ಯದಲ್ಲಿ ಸೋತು ಫ್ರಾನ್ಸ್ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಪಂದ್ಯದಲ್ಲಿ ಸಮಚಿತ್ತದಿಂದ ಆಡಿದ ಸ್ಪೇನ್ 2026 ರ FIFA ವಿಶ್ವಕಪ್ ಫೈನಲ್‌ಗೇರಿತು. ಕೈಲಿಯನ್ ಎಂಬಾಪೆಯಂತಹ (Kylian Mbappé) ಆಕ್ರಮಣಕಾರಿ ಆಟಗಾರರ ಹೊರತಾಗಿಯೂ ಸ್ಪಷ್ಟ ಅವಕಾಶಗಳನ್ನು ಸೃಷ್ಟಿಸಲು ಹೆಣಗಾಡಿದ ಡಿಡಿಯರ್ ಡೆಸ್ಚಾಂಪ್ಸ್ ತಂಡವು ನಿರಾಸೆ ಅನುಭವಿಸಿತು. ಸ್ಪೇನ್ ತಂಡ ಎರಡು ಗೋಲುಗಳನ್ನು ಗಳಿಸಿ 2-0 ಜಯ ಸಾಧಿಸಿತು. ಇದನ್ನೂ ಓದಿ: FIFA World Cup | ಫ್ರಾನ್ಸ್ ಮಣಿಸಿ ಫೈನಲ್‌ಗೆ ಸ್ಪೇನ್ ಎಂಟ್ರಿ

ದೇಶಕ್ಕೆ ಮೂರನೇ ವಿಶ್ವಕಪ್ ಕೈತಪ್ಪಿತು ಎಂದು ಆಕ್ರೋಶಭರಿತರಾದ ಫುಟ್‌ಬಾಲ್ ಫ್ಯಾನ್ಸ್ ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ಫ್ರೆಂಚ್ ರಾಜಧಾನಿಯ ಕೆಲವು ಭಾಗಗಳಲ್ಲಿ ಗಲಭೆಗಳು ನಡೆದವು. ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ. ಈ ವೇಳೆ ಗಲಭೆ ನಿಯಂತ್ರಣಕ್ಕೆ ಮುಂದಾದ ಪೊಲೀಸರ ಜೊತೆಯೂ ಫ್ಯಾನ್ಸ್ ಘರ್ಷಣೆ ಮಾಡಿಕೊಂಡಿದ್ದಾರೆ. ಹಿಂಸಾಚಾರದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಫ್ರಾನ್ಸ್‌ನ ಆಕ್ರಮಣಕಾರಿ ಒಗ್ಗಟ್ಟಿನ ಕೊರತೆ, ಕೈಲಿಯನ್ ಎಂಬಾಪೆ ದುರ್ಬಲ ಪ್ರದರ್ಶನ, ಪ್ರಥಮಾರ್ಧದಲ್ಲಿ ಬಿಟ್ಟುಕೊಟ್ಟ ಪೆನಾಲ್ಟಿಯಿಂದಾಗಿ ಸೆಮಿಫೈನಲ್‌ನಲ್ಲಿ ಸ್ಪೇನ್ ಗೆಲುವು ದಾಖಲಿಸಿತು. ಇದನ್ನೂ ಓದಿ: ಕೇಳಿಕೊಂಡರೂ ಹಾಲೆಂಡ್‌ಗೆ ಚೆಂಡು ವರ್ಗಾಯಿಸಲು ನಿರಾಕರಣೆ; ಸಹ ಆಟಗಾರನ ಪ್ರಮಾದಕ್ಕೆ ದೊಡ್ಡ ಬೆಲೆತೆತ್ತ ನಾರ್ವೆ
