ಕಲಬುರಗಿ: ಶಿವರಾತ್ರಿ ದಿನದಂದು ಕಲಬುರಗಿಯ ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಗಲಭೆ ನಡೆಸಲು ಕಾರಣವಾಗಿದ್ದ ಮಾಸ್ಟರ್ ಮೈಂಡ್ ಮೊಹಮ್ಮದ್ ಫಿರ್ದೋಸ್ ಅನ್ಸಾರಿ ಇನ್ನು ಒಂದು ವರ್ಷ ಬೆಳಗಾವಿ ಜೈಲಿನಲ್ಲೇ ಇರಲಿದ್ದಾನೆ.
ಜಿಲ್ಲಾಧಿಕಾರಿ ಆದೇಶದಂತೆ ಫಿರ್ದೋಸ್ ಅನ್ಸಾರಿಯನ್ನು ಗಡಿಪಾರು ಮಾಡಿ, ಬೆಳಗಾವಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಈಗ ಡಿಸಿ ಆದೇಶವನ್ನು ಕಲಬುರಗಿ ಹೈಕೋರ್ಟ್ ಸಲಹಾ ಮಂಡಳಿ ಎತ್ತಿ ಹಿಡಿದಿದೆ.
Advertisement
Advertisement
ಏನಿದು ಪ್ರಕರಣ?
ಮಾರ್ಚ್ 1ರಂದು ಆಳಂದ ಪಟ್ಟಣದಲ್ಲಿ ಗಲಭೆ, ಕಲ್ಲುತೂರಾಟ ನಡೆದಿತ್ತು. ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ, ಹೊರ ಬರುವ ವೇಳೆ ಕಲ್ಲು ತೂರಾಟ ನಡೆದಿತ್ತು. ಡಿಸಿ, ಎಸ್‌ಪಿ, ಕೇಂದ್ರ ಸಚಿವ ಖೂಬಾ, ಶಾಸಕರು ಸೇರಿದಂತೆ ಹತ್ತಾರು ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದನ್ನೂ ಓದಿ: ನಾರ್ವೆಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ, 14 ಮಂದಿಗೆ ಗಂಭೀರ ಗಾಯ
Advertisement
Advertisement
ಈ ಕಲ್ಲು ತೂರಾಟ ಹಾಗೂ ಗಲಭೆ ಎಬ್ಬಿಸಲು ಅನ್ಸಾರಿ ಮಾಸ್ಟರ್ ಪ್ಲಾನ್ ಮಾಡಿದ್ದು, ಮುಂಚಿತವಾಗಿಯೇ ಕಟ್ಟಡಗಳ ಮೇಲೆ ಕಲ್ಲು ಜಮಾವಣೆ ಮಾಡಿ ಲಾಠಿಗಳನ್ನು ಸಂಗ್ರಹಿಸಿಡಲಾಗಿತ್ತು. ಅನ್ಸಾರಿ ಸೂಚನೆಯಂತೆ ನೂರಾರು ಜನ ಗಲಭೆಗೆ ಸಿದ್ದರಾಗಿದ್ದರು. ಇದನ್ನೂ ಓದಿ: ಶಿವಸೇನೆ ಹೆಸರು ಬಳಸದಂತೆ ಶಿಂಧೆಗೆ ಠಾಕ್ರೆ ಸವಾಲ್ – 16 ರೆಬೆಲ್ ಶಾಸಕರಿಗೆ ನೊಟೀಸ್
ಗಲಭೆಗೆ ಸಂಚು ರೂಪಿಸಿದ್ದ ಹಿನ್ನೆಲೆ ಫಿರ್ದೋಸ್ ಅನ್ಸಾರಿಯನ್ನು ಬಂಧಿಸಲಾಗಿತ್ತು. ಅವನನ್ನು ಗಡಿಪಾರು ಮಾಡಿ, ಬೆಳಗಾವಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅನ್ಸಾರಿಯ ಮೇಲೆ ಅಕ್ರಮ ಕಳ್ಳಭಟ್ಟಿ, ಜೂಜು, ಪೈರಸಿ ಸೇರಿದಂತೆ ಹತ್ತು ಹಲವು ಕೇಸ್‌ಗಳಿವೆ. ಆಳಂದ ಪೊಲೀಸ್ ಠಾಣೆಯೊಂದರಲ್ಲೇ ಅನ್ಸಾರಿ ವಿರುದ್ಧ 33 ಎಫ್‌ಐಆರ್ ದಾಖಲಾಗಿದೆ.