ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮೊನ್ನೆಯಷ್ಟೇ ಬೈಕ್ ಮೇಲೆ ಸವಾರಿ (Bike Ride) ಮಾಡಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟ್ರಾಫಿಕ್ ಸಮಸ್ಯೆಯ ಕಾರಣದಿಂದಾಗಿ ಅಪರಿಚಿತ ವ್ಯಕ್ತಿಯೋರ್ವನಿಂದ ಬೈಕ್ ನಲ್ಲಿ ಡ್ರಾಪ್ ಹಾಕಿಸಿಕೊಂಡೆ ಎಂದು ಬರೆದುಕೊಂಡಿದ್ದರು. ಬೈಕ್ ಸವಾರಿ ವೇಳೆ ಇಬ್ಬರೂ ಹೆಲ್ಮೆಟ್ ಹಾಕಿಕೊಳ್ಳದೇ ಇರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮುಂಬೈ ಪೊಲೀಸ್ ಕೂಡ ಎಂಟ್ರಿ ಕೊಟ್ಟಿದ್ದರು.
Advertisement
ಪ್ರಭಾವಿಶಾಲಿಗಳೇ ಹೀಗೆ ಕಾನೂನು ಉಲ್ಲಂಘಿಸಿದರೆ ಹೇಗೆ? ಅವರ ಮೇಲೆ ಅಗತ್ಯ ಕ್ರಮ ತಗೆದುಕೊಳ್ಳಬೇಕು ಎಂದು ಹಲವರು ಮುಂಬೈ (Mumbai) ಟ್ರಾಫಿಕ್ ಪೊಲೀಸರಿಗೆ ಆಗ್ರಹಿಸಿದ್ದರು. ಈ ಆಗ್ರಹ ಜೋರಾಗುತ್ತಿದ್ದಂತೆಯೇ ಬಿಗ್ ಬಿ ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಟಾ ಹೊಡೆದಿದ್ದಾರೆ. ತಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಬೈಕ್ ಸವಾರಿ ಕೂಡ ಆಗಿಲ್ಲ. ಅದು ಶೂಟಿಂಗ್ ಸ್ಥಳದಲ್ಲಿ ನಡೆದ ಘಟನೆ. ನಲವತ್ತು ಮೀಟರ್ ಕೂಡ ಸವಾರಿ ಮಾಡಿಲ್ಲ ಎಂದು ತೇಪೆ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ, ಬೈಕ್ ಸವಾರಿ ಮಾಡಬೇಕಾದ ಸಂದರ್ಭ ಬಂದಾಗ ಹೆಲ್ಮೆಟ್ ಧರಿಸಿರುವ ಕುರಿತು ಹೇಳಿದ್ದಾರೆ.
Advertisement
Advertisement
ಏನಿದರ ಹಿನ್ನೆಲೆ?
Advertisement
ಮೊನ್ನೆ ಬೈಕ್ ಸವಾರನ ಫೋಟೋ ಹಂಚಿಕೊಂಡಿದ್ದ ಬಚ್ಚನ್, ‘ಡ್ರಾಪ್ ನೀಡಿದ್ದಕ್ಕೆ ಗೆಳೆಯನಿಗೆ ಧನ್ಯವಾದಗಳು. ನನ್ನನ್ನು ಸರಿಯಾದ ಸಮಯಕ್ಕೆ ಸೇರಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೀಯಾ. ಕ್ಯಾಪ್, ಶರ್ಟ್ಸ್ ಮತ್ತು ಹಳದಿ ಬಣ್ಣದ ಟೀ ಶರ್ಟ್ ತೊಟ್ಟಿದ್ದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಬೈಕ್ ಓಡಿಸುವವರು ಮತ್ತು ಅಮಿತಾಭ್ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಹಾಗಾಗಿ ವ್ಯಕ್ತಿಯೊಬ್ಬರು ಆ ಫೋಟೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ದಂಡ ಹಾಕುವಂತೆ ಒತ್ತಾಯಿಸಲಾಗಿತ್ತು. ಇದನ್ನೂ ಓದಿ:ದಿ ಕೇರಳ ಸ್ಟೋರಿ ನಂತರ ವಿವಾದಕ್ಕೆ ಗುರಿಯಾಯ್ತು ತಮಿಳಿನ ಚಿತ್ರ
ಮುಂಬೈ ಪೊಲೀಸ್ (Police) ಇದೀಗ ಕ್ರಮ ತಗೆದುಕೊಳ್ಳಲು ಮುಂದಾಗಿದ್ದು, ಸಾರಿಗೆ ನಿಮಯ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟುವಂತೆ ಅಮಿತಾಭ್ ಮತ್ತು ಸವಾರನಿಗೆ ಸೋಷಿಯಲ್ ಮೀಡಿಯಾ ಮೂಲಕವೇ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಮಿತಾಭ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ದಂಡ ಕಟ್ಟುವುದು ಅಮಿತಾಭ್ ಗೆ ಅನಿವಾರ್ಯವಾಗಿದೆ. ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.
ಅಮಿತಾಭ್ ಚಿತ್ರೀಕರಣಕ್ಕೆ (Shooting) ತೆರಳಬೇಕಿತ್ತು. ಆದರೆ, ಟ್ರಾಫಿಕ್ ನಲ್ಲಿ ಸಿಲುಕಿ ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿತ್ರೀಕರಣಕ್ಕೆ ಎಂದೂ ತಡವಾಗಿ ಹೋಗದ ಅಮಿತಾಭ್, ಆ ಕ್ರಿಯೆಯನ್ನು ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಅವರು ಬೈಕ್ ಸವಾರನ ಮೊರೆ ಹೋಗಿದ್ದರು. ಅವನು ಕೂಡ ಬಿಗ್ ಬಿಗೆ ಡ್ರಾಪ್ ಮಾಡಿದ್ದ ಎಂದು ಹೇಳಲಾಗಿತ್ತು.