ಮಡಿಕೇರಿ: ಸಾರ್ವಜನಿಕವಾಗಿ ಅಥವಾ ಬಲವಂತವಾಗಿ ಹಣ ಸಂಗ್ರಹಿಸದೇ, ಕೇವಲ ಸಮಿತಿ ಸದಸ್ಯರು, ಸ್ನೇಹಿತರು, ಹಿತೈಷಿಗಳು, ದಾನಿಗಳ ನೆರವಿನಿಂದ ಮಾತ್ರ ಪ್ರತಿಷ್ಠಾಪಿಸಲ್ಪಡುವ ಮಡಿಕೇರಿಯ (Madikeri) ಕೊಹಿನೂರು ರಸ್ತೆಯ ಹಿಂದೂ ಯುವ ಶಕ್ತಿಯ ಗಣಪ ಜಿಲ್ಲೆಯಲ್ಲೇ ಶ್ರೀಮಂತ ಗಣಪತಿ ಎಂದು ಪ್ರಸಿದ್ಧಿ ಪಡೆದಿದೆ.
ಶ್ರೀಮಂತ ಗಣಪತಿ ಈ ಬಾರಿ ಇನ್ನಷ್ಟು ಸಿರಿವಂತನಾಗುತ್ತಿದ್ದಾನೆ. ಬೆಳ್ಳಿಯ ಕಿರೀಟ, ಕೊಡೆ, ಮೋದಕ, ಪಾಳ, ಅಂಕುಶ, ಹಣೆಮಾಲೆ, ಚಿನ್ನದ ಪದಕ, ಬಳೆಗಳು ಸೇರಿದಂತೆ ಅಂದಾಜು 15 ಲಕ್ಷ ರೂ. ಮೌಲ್ಯದ ಆಭರಣಗಳನ್ನು ತೊಡಿಸಿ ಈ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದನ್ನೂ ಓದಿ: ಸಹಾಯ ಕೇಳಿ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಕಾನ್ಸ್‌ಟೇಬಲ್ ಅರೆಸ್ಟ್
ವರ್ಷದಿಂದ ವರ್ಷಕ್ಕೆ ಬೆಳ್ಳಿಯ ವಿವಿಧ ಬಗೆಯ ಪ್ರಭಾವಳಿಗಳನ್ನು ಸಂಘದ ಸದಸ್ಯರು ನೀಡುತ್ತಿದ್ದಾರೆ. ಗಣಪನ ಮೂರ್ತಿ ಹಳೆಯ ಆಭರಣಗಳೊಂದಿಗೆ ಲಕ್ಷ ಲಕ್ಷ ಮೌಲ್ಯದ ಬೆಳ್ಳಿಯ ಪ್ರಭಾವಳಿಯೊಂದಿಗೆ ಗಮನ ಸೆಳೆಯುತ್ತಿದೆ.
ಇದರೊಂದಿಗೆ ಭಕ್ತಾದಿಯೊಬ್ಬರು 15 ಸಾವಿರ ರೂ. ಮೌಲ್ಯದ ಚಿನ್ನದ ಹಣೆಯ ತ್ರಿಶೂಲವನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ವಿಶೇಷವಾಗಿ ಪೂಜೆ ನೇರವೇರಿಸಿದ ಬಳಿಕ ಶನಿವಾರ ಸಂಜೆ ವೇಳೆಗೆ ಗಣಪತಿ ಮೂರ್ತಿಯನ್ನು ಗೌರಿ ಕೇರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ಕಾರು – 10 ಮೀಟರ್ ಎಳೆದೊಯ್ದು ಚಾಲಕ ಎಸ್ಕೇಪ್!