ಕಾಬೂಲ್: ಅಂತಾರಾಷ್ಟ್ರೀಯ ಒಪ್ಪಿಗೆ ಬಯಸುವ ತಾಲಿಬಾನ್ ಮೊದಲು ತಮ್ಮ ದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಿಬೇಕು ಎಂದು ವಿಶ್ವಸಂಸ್ಥೆ ತಾಲಿಬಾನ್‍ಗೆ ಸಂದೇಶವನ್ನು ನೀಡಿದೆ.
Advertisement
ತಾಲಿಬಾನ್ ಸರ್ಕಾರ ಅಂತರಾಷ್ಟ್ರೀಯ ಒಪ್ಪಿಗೆ ಪಡೆಯಬೇಕು ಎಂದು ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ಯುಎಸ್ ಮಿಷನ್ ಮುಖ್ಯಸ್ಥ ಇಯಾನ್ ಮೆಕ್ಕಾರಿ ಈ ಕುರಿತು ಟ್ವಿಟ್ಟರ್‍ನಲ್ಲಿ ಉತ್ತರ ಕೊಟ್ಟಿದ್ದು, ಕಳೆದ ವರ್ಷ ದೋಹಾದಲ್ಲಿ, ನಾವು ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ತಾಲಿಬಾನ್‍ನೊಂದಿಗೆ ಸಂವಾದವನ್ನು ನಡೆಸಿದ್ದೇವೆ. ನಾವು ಯುಎನ್ ನಾಗರಿಕರು ಮತ್ತು ಅಫ್ಘಾನ್ ಜನರೊಂದಿಗೆ ವ್ಯಾಪಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಲವು ಸವತ್ತುಗಳನ್ನು ಒದಗಿಸಿದ್ದೇವೆ. ನಾವು ಸಹಾಯ ಮಾಡಲು ಸಾಧ್ಯವಾಗಿದೆ ಎಂದು ನನಗೆ ಸಂತೋಷವಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ನಾವು ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಕಿಪಾಕ್ಸ್‌ಗೆ ಭಾರತದಲ್ಲಿ ಮೊದಲ ಬಲಿ
Advertisement
I appreciate the extraordinary support of international partners & likeminded community. Together we have sent a clear message: if the Taliban hope to gain the acceptance of the int’l community, they must listen to & honor the views of all Afghan people & respect human rights.
— Chargé d’Affaires Karen Decker (@USAmbKabul) July 31, 2022
Advertisement
ಅಂತಾರಾಷ್ಟ್ರೀಯ ಪಾಲುದಾರರು ಮತ್ತು ಸಮಾನಮನಸ್ಕ ಸಮುದಾಯದ ಅಸಾಧಾರಣ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ನಾವು ಒಟ್ಟಾಗಿ ಒಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದ್ದೇವೆ. ತಾಲಿಬಾನ್ ಅಂತರಾಷ್ಟ್ರೀಯ ಸಮುದಾಯದ ಅಂಗೀಕಾರವನ್ನು ಪಡೆಯಲು ಆಶಿಸಿದರೆ, ಅವರು ಎಲ್ಲ ಆಫ್ಘನ್ ಜನರ ಅಭಿಪ್ರಾಯಗಳನ್ನು ಕೇಳಬೇಕು ಮತ್ತು ಗೌರವಿಸಬೇಕು. ಅದರ ಜೊತೆಗೆ ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಸಂದೇಶವನ್ನು ಕಳುಹಿಸಿದರು.
Advertisement
ಬಾಲಕಿಯರಿಗೆ ಮಾಧ್ಯಮಿಕ ಶಾಲೆಗಳಿಗೆ ಪ್ರವೇಶ ನೀಡಲು ತಾಲಿಬಾನ್‍ನ ನಿರಂತರವಾಗಿ ನಿರಾಕರಣೆ ಮಾಡುತ್ತಿದೆ. ಅಲ್ಲದೇ ಮಾಧ್ಯಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದೆ. ಮಹಿಳೆಯರ ಹಕ್ಕುಗಳ ಮೇಲೆ ಸ್ವೀಕಾರಾರ್ಹವಲ್ಲದ ನಿರ್ಬಂಧಗಳು ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಸಿಕ್ಕ-ಸಿಕ್ಕವರ ಮೇಲೆ ಚಾಕು ಇರಿದು ಪರಾರಿಯಾಗಿದ್ದವ ಅರೆಸ್ಟ್