LatestLeading NewsMain PostNational

ಮಂಕಿಪಾಕ್ಸ್‌ಗೆ ಭಾರತದಲ್ಲಿ ಮೊದಲ ಬಲಿ

Advertisements

ತಿರುವನಂತಪುರಂ: ಭಾರತವು ಮೊದಲ ಮಂಕಿಪಾಕ್ಸ್ ಮರಣವನ್ನು ದಾಖಲಿಸಿದೆ. ಯುಇಎಯಿಂದ ಬಂದಿದ್ದ ಕೇರಳದ 22 ವರ್ಷದ ಯುವಕ ತ್ರಿಶೂರ್‌ನಲ್ಲಿ ಸಾವನ್ನಪ್ಪಿದ್ದಾನೆ.

ಮೃತ ಯುವಕ ಯುಇಎಯಿಂದ ಭಾರತಕ್ಕೆ ಹಿಂದಿರುಗಿದಾಗ ಮಾಡಿಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ದೃಢವಾಗಿತ್ತು. ಆದರೂ ಮುಚ್ಚಿಟ್ಟು ಎಲ್ಲರೊಂದಿಗೆ ಬೆರೆತಿದ್ದ. ಸ್ನೇಹಿತರೊಂದಿಗೆ ಫುಟ್‍ಬಾಲ್ ಸಹ ಆಡಿದ್ದ. ಜುಲೈ 26 ರಂದು ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ: ಮೋದಿ

ತ್ರಿಶೂರ್‍ನ ಪುನ್ನಿಯೂರ್‌ನ ಈ ಯುವಕ ಯುಎಇಯಿಂದ ಮರಳಿದ ಕೆಲವೇ ದಿನಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ, ಆರೋಗ್ಯ ಇಲಾಖೆ ಅವನ ಮಾದರಿಗಳನ್ನು ಅಲಪ್ಪುಳದ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಕೇರಳ ಘಟಕಕ್ಕೆ ಕಳುಹಿಸಿದೆ.

ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯುವಕನಿಗೆ ಮಂಕಿಪಾಕ್ಸ್ ಇರುವುದು ದೃಢಪಟ್ಟಿತ್ತು. ಆದರೆ ಅವನ ಕುಟುಂಬದ ಸದಸ್ಯರು ಶನಿವಾರವಷ್ಟೇ ಪರೀಕ್ಷಾ ಫಲಿತಾಂಶವನ್ನು ಆಸ್ಪತ್ರೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಕುರಿತು ಮಾತನಾಡಿದ್ದು, ಮಂಕಿಪಾಕ್ಸ್ ಲಕ್ಷಣಗಳಿರುವ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿಯೂ ಆತನ ಫಲಿತಾಂಶ ಧನಾತ್ಮಕವಾಗಿತ್ತು. ಆದರೂ ಆತ ಎಲ್ಲಕಡೆ ಓಡಾಡಿಕೊಂಡು ಇದ್ದ. ತೀವ್ರವಾಗಿ ಆರೋಗ್ಯ ಕೆಟ್ಟಾಗ ಮತ್ತೆ ತ್ರಿಶೂರ್‍ನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಆಗಲೂ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಳ್ಳ-ಪೊಲೀಸ್ ಆಟವಾಡುತ್ತಾ ನೆರೆ ಮನೆಯ ಬಾಲಕನನ್ನು ಕೊಂದ ಬಿಜೆಪಿ ಮುಖಂಡನ ಮಗ

Live Tv

Leave a Reply

Your email address will not be published.

Back to top button