ಧಾರವಾಡ: ಇಲ್ಲಿನ ಖ್ಯಾತ ಮನೋತಜ್ಞ ಆನಂದ ಪಾಂಡುರಂಗಿ (Anand Pandurangi) (74) ಅವರಿಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅವರಿಗೆ ಹೃದಯಾಘಾತ ಆಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತಿತ್ತು. ಆದರೆ ಇಂದು (ಸೆ.24) ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದನ್ನೂ ಓದಿ: ಹಲವು ದಿನಗಳ ಬಳಿಕ ಕೊಡಗಿನಲ್ಲಿ ಮಳೆ ಆರ್ಭಟ – ವಾಹನ ಸವಾರರ ಪರದಾಟ
ಆನಂದ ಪಾಂಡುರಂಗಿ ಅವರು ವೈದ್ಯ ಹಾಗೂ ಮನೋವಿಜ್ಞಾನ ಲೇಖಕರೂ ಆಗಿದ್ದರು. ಅವರ ಬಳಿ ರಾಜ್ಯದ ಮೂಲೆಮೂಲೆಗಳಿಂದ ಮಾನಸಿಕ ರೋಗಿಗಳು ಚಿಕಿತ್ಸೆಗೆ ಬರುತಿದ್ದರು. ಉತ್ತಮ ಭಾಷಣಕಾರ ಆಗಿದ್ದ ಪಾಂಡುರಂಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿತ್ತು.
ಪಾಂಡುರಂಗಿ ಅವರ ನಿಧನಕ್ಕೆ ಜಿಲ್ಲೆಯ ಹಲವು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾಧಿಕಾರಿ ಆರ್.ಸ್ನೇಹಲ್, ಪೊಲೀಸ್ ಆಯುಕ್ತ ಭೂಷಣ ಭೋರಸೆ ಅವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: KPSC ನೇಮಕಾತಿ ಹಗರಣ; KAS ಅಭ್ಯರ್ಥಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಡಾ.ಆನಂದ ಪಾಂಡುರಂಗಿ ಅವರಿಗೆ ಸರ್ಕಾರಿ ಗೌರವ ನೀಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಿಎಂ ಡಿಕೆಶಿ ಅವರಿಗೆ ಮನವಿ ಮಾಡಿದ್ದರು. ಜೋಶಿ ಅವರ ಕೋರಿಕೆ ಮೇರೆಗೆ ಸರ್ಕಾರ ಡಾ.ಆನಂದ ಪಾಂಡುರಂಗಿ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವ ನೀಡಿದ್ದಾರೆ. ಪೊಲೀಸ್ ಗೌರವದ ನಂತರ ಪಾರ್ಥೀವ ಶರೀರವನ್ನು ಹೊಸಯಲ್ಲಾಪುರ ರುದ್ರಭೂಮಿಗೆ ಕೊಂಡೊಯ್ಯಲಾಯಿತು.

