ಬೆಂಗಳೂರು: ಕೆಪಿಎಸ್ಸಿ ನೇಮಕಾರಿ ಹಗರಣ (KPSC Scam) ಪ್ರಕರಣದಲ್ಲಿ ಕೆಎಎಸ್ ಅಭ್ಯರ್ಥಿ ಮಮಿತಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 52ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಅಭ್ಯರ್ಥಿ ಮಮಿತಾ ಕೆಎಎಸ್ ಪರೀಕ್ಷೆ ಬರೆದು ಸಂದರ್ಶನ ಎದುರಿಸಿದ್ದರು. ಸಂದರ್ಶನ ಬಳಿಕ ಅಭ್ಯರ್ಥಿಯನ್ನ ಕೆಪಿಎಸ್ಸಿ ಸದಸ್ಯೆ ಶಾಂತ ಹೊಸಮನಿ ಸಂಪರ್ಕ ಮಾಡಿದ್ದರು. ಪರೀಕ್ಷೆಯಲ್ಲಿ ಸೆಲೆಕ್ಟ್ ಆಗಲು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಶಾಂತ ಹೊಸಮನಿಗೆ ಮಮಿತಾ ಹಣ ನೀಡಿದ್ದರು. ಇದನ್ನೂ ಓದಿ: ಕೆಪಿಎಸ್ಸಿ ಹಗರಣ – ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಶಾಂತಾ ಹೊಸಮನಿ
ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ಕಾಂತ್ಕುಮಾರ್ ಎಂಬವರು ದೂರು ನೀಡಿದ್ದರು. ಅಭ್ಯರ್ಥಿ ಮಮಿತಾ ಹಾಗೂ ಶಾಂತ ಹೊಸಮನಿ ವಿರುದ್ಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಬಂಧನ ಭೀತಿ ಹಿನ್ನೆಲೆ ನಿರೀಕ್ಷಣಾ ಜಾಮೀನು ಕೋರಿ ಅಭ್ಯರ್ಥಿ ಮಮಿತಾ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಸಿಐಡಿ ವಿಚಾರಣೆಗೂ ಹಾಜರಾಗಿದ್ದರು. ಈಗ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ. ಇದನ್ನೂ ಓದಿ: ಕೆಪಿಎಸ್ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿಕೆಶಿ
