ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಜಿಯೋ ಗೆ ಹೊಸದಾಗಿ 60 ಲಕ್ಷ ಗ್ರಾಹಕರು ಮಾತ್ರ ಸೇರ್ಪಡೆಯಾಗಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ತಿಳಿಸಿದೆ.
ಸೆಪ್ಟೆಂಬರ್‍ನಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಬಳಿಕದ ಮಾರ್ಚ್ ತಿಂಗಳಿನಲ್ಲಿ ಅತಿ ಕಡಿಮೆ ಸಂಖ್ಯೆಯ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದಾರೆ ಎಂದು ಟ್ರಾಯ್ ತಿಳಿಸಿದೆ. ಈ ಅವಧಿಯಲ್ಲಿ ಏರ್‍ಟೆಲ್ 30 ಲಕ್ಷ, ಐಡಿಯಾ 21 ಲಕ್ಷ, ವೊಡಾಫೋನ್ 1.8 ಲಕ್ಷ ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
Advertisement
ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ 1.6 ಕೋಟಿ ಗ್ರಾಹಕರನ್ನು ತಲುಪಿದ್ದ ಜಿಯೋ ಅಕ್ಟೋಬರ್ ನಲ್ಲಿ 1.96 ಕೋಟಿ, ನವೆಂಬರ್ ನಲ್ಲಿ 1.63 ಕೋಟಿ ಗ್ರಾಹಕರನ್ನು ತಲುಪಿತ್ತು. ಹ್ಯಾಪಿ ನ್ಯೂ ಇಯರ್ ಪ್ಲಾನ್ ಬಳಿಕ ಜಿಯೋಗೆ ಹೊಸದಾಗಿ 2.3 ಕೋಟಿ ಗ್ರಾಹರು ಸೇರ್ಪಡೆಯಾಗಿದ್ದರು.
Advertisement
ಪ್ರಸ್ತುತ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‍ಟೆಲ್ 23.39%, ವೊಡಾಫೋನ್ 17.87%, ಐಡಿಯಾ 16.70% ಪಾಲನ್ನು ಪಡೆದುಕೊಂಡಿದ್ದರೆ, ಜಿಯೋ 9.29% ಪಡೆದುಕೊಂಡಿದೆ.
Advertisement
ಕೇವಲ 5 ಕೋಟಿ ಗ್ರಾಹಕರನ್ನು 83 ದಿನದಲ್ಲಿ ತಲುಪಿದ್ದ ಜಿಯೋ, 10 ಕೋಟಿ ಗ್ರಾಹಕರ ಸಂಖ್ಯೆಯನ್ನು 2017ರ ಫೆಬ್ರವರಿಯಲ್ಲಿ 22 ರಂದು ತಲುಪಿತ್ತು.
Advertisement
ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?