ನವದೆಹಲಿ: ಉದ್ಯೋಗಿಗಳ ಬೆಸ್ಟ್ ಕಂಪನಿ ಪಟ್ಟಿಯಲ್ಲಿ ವಿಶ್ವದಲ್ಲೇ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ 52ನೇ ಸ್ಥಾನ ಪಡೆದಿದೆ.
ಫೋರ್ಬ್ಸ್ ಮ್ಯಾಗಜಿನ್ ವಿಶ್ವದ 750 ಬೃಹತ್ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಈ ರ‍್ಯಾಂಕ್ ನೀಡಿದೆ. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನ ಪಡೆದರೆ ಅಮೆರಿಕದ ಐಬಿಎಂ ಎರಡನೇ ಸ್ಥಾನ ಪಡೆದಿದೆ.
Advertisement
ಅಮೆರಿಕದ ಕಂಪನಿಗಳಾದ ಮೈಕ್ರೋಸಾಫ್ಟ್, ಅಮೆಜಾನ್, ಆಪಲ್, ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್, ಡೆಲ್ ಅನುಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿದೆ. ಚೀನಾದ ಹುವಾವೇ 8ನೇ ಸ್ಥಾನ ಪಡೆದಿದೆ. ಫೇಸ್‌ಬುಕ್ 49ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್
Advertisement
Advertisement
ಭಾರತದ ಕಂಪನಿಗಳಿಗೆ ಎಷ್ಟು ಸ್ಥಾನ?
ರಿಲಯನ್ಸ್ ಇಂಡಸ್ಟ್ರೀಸ್ 52, ಐಸಿಐಸಿಐ ಬ್ಯಾಂಕ್ 65, ಎಚ್‌ಡಿಎಫ್‌ಸಿ 77, ಎಚ್‌ಸಿಎಲ್ ಟೆಕ್ನಾಲಜೀಸ್ 90, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 119, ಲರ್ಸನ್ ಆಂಡ್ ಟ್ಯಾಬ್ರೋ 127, ಇಂಡಿಯನ್ ಬ್ಯಾಂಕ್ 314, ಕೋಟಕ್ ಮಹೀಂದ್ರಾ ಬ್ಯಾಂಕ್ 418, ಬ್ಯಾಂಕ್ ಆಫ್ ಇಂಡಿಯಾ 451, ಲೈಫ್ ಇನ್ಶುರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ 504 ಸ್ಥಾನ ಪಡೆದಿದೆ.
Advertisement
58 ದೇಶಗಳಲ್ಲಿ ಕೆಲಸ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಂಸ್ಥೆಗಳ 1,50,000 ಉದ್ಯೋಗಿಗಳನ್ನು ಸಂದರ್ಶಿಸಿ ಫೋರ್ಬ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.