ಯಶ್ ನಟನೆಯ ‘ಕೆಜಿಎಫ್ 2’ ರಿಲೀಸ್ ಗೆ ಭರದಿಂದ ಸಿದ್ಧತೆ ನಡೆದಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಆಯಾ ಭಾಷೆಯ ಅಭಿಮಾನಿಗಳು ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅಂದೇ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರ ಕೂಡ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ
Advertisement
ಥಿಯೇಟರ್ ನಲ್ಲಿ ಜೇಮ್ಸ್ ಸಿನಿಮಾ ಇನ್ನೂ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಆರ್.ಆರ್.ಆರ್ ಸಿನಿಮಾದ ಅಬ್ಬರದ ನಡುವೆಯೂ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಇದೆ. ಬಿಡುಗಡೆಯಾಗಿ ಒಂದು ತಿಂಗಳ ಮುಂಚೆಯೇ ಓಟಿಟಿಯಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ, ಚೆನ್ನಮ್ಮ, ರಾಯಣ್ಣನೂ ಅಲ್ಲ: ನಟ ಚೇತನ್
Advertisement
Advertisement
ಒಂದು ಕಡೆ ಯಶ್ ನಟನೆಯ ಕೆಜಿಎಫ್ 2 ಸಾವಿರಾರು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಆರ್.ಆರ್.ಆರ್ ಸಿನಿಮಾ ಕೂಡ ಬಿಡುಗಡೆ ಆಗಿದೆ. ಅಲ್ಲದೇ, ತಮಿಳಿನ ವಿಜತ್ ಅವರ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಸಹಜವಾಗಿಯೇ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ.
Advertisement
ಕರ್ನಾಟಕ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ ‘ಜೇಮ್ಸ್’ ಬರಲಿದೆ ಅತೀ ಶೀಘ್ರದಲ್ಲಿ SonyLIV ನಲ್ಲಿ.#James, Streaming in Kannada, Telugu, Tamil, Malayalam & Hindi on April 14 exclusively on SonyLIV. #JamesOnSonyLIV @PRKAudio @PuneethRajkumar @PriyaAnand pic.twitter.com/h9bi7KWZU1
— SonyLIV (@SonyLIV) March 30, 2022
ಜೇಮ್ಸ್ ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿರುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಓಟಿಟಿಯಲ್ಲಿ ಏಪ್ರಿಲ್ 14ಕ್ಕೆ ಸ್ಟ್ರೀಮಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ತಂದೆ, ತಾತನ ಹೆಸರು ಬಳಸಿಕೊಳ್ಳದೆ ಜಿಪಂ ಸ್ಥಾನ ಗೆಲ್ಲಲಿ: ನಿಖಿಲ್‍ಗೆ ಸುಮಲತಾ ಸವಾಲು
ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಈ ನಾಲ್ಕೂ ಭಾಷೆಗಳಲ್ಲೂ ಜೇಮ್ಸ್ ರಿಲೀಸ್ ಆಗುತ್ತಿದೆ. ಈ ಕಾರಣದಿಂದಾಗಿ ಸ್ಯಾಂಡಲ್ ವುಡ್ ಪಾಲಿಗೆ ಡಬಲ್ ಸಂಭ್ರಮ ತಂದಿದೆ. ಒಂದು ಕಡೆ ಯಶ್ ನಟನೆಯ ಸಿನಿಮಾ ಮತ್ತೊಂದು ಕಡೆ ಪುನೀತ್ ಅವರ ಜೇಮ್ಸ್. ಎರಡೂ ಸಿನಿಮಾಗಳನ್ನೂ ನೋಡಿ ಆನಂದಿಸಬಹುದಾಗಿದೆ.