ಕೋಲ್ಕತ್ತಾ: ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಅನುಬ್ರತಾ ಮೊಂಡಲ್‌ಗೆ ಜಾಮೀನು ಮಂಜೂರು ಮಾಡಿ. ಇಲ್ಲದೇ ಹೋದರೆ ಸ್ವತಃ ನ್ಯಾಯಾಧೀಶರೇ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಹೀಗೆಂದು ಅಸನ್ಸೋಲ್‌ನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದೆ.
ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ವಿರುದ್ಧದ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಸಿಬಿಐ ವಶದಲ್ಲಿರುವ ಅನುಬ್ರತಾ ಅವರ ಜಾಮೀನು ಅರ್ಜಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಅನುಬ್ರತಾಗೆ ಜಾಮೀನು ಕೋರಿ ಮತ್ತೊಂದು ಅರ್ಜಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ತಲುಪಿದೆ. ಸಿಬಿಐ ಮೂಲಗಳ ಪ್ರಕಾರ, ಗೋವು ಕಳ್ಳಸಾಗಣೆ ಪ್ರಕರಣದಲ್ಲಿ ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲದಿದ್ದರೆ ಕುಟುಂಬವನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಪ್ರವಾದಿ ಅವಹೇಳನ – BJPಯಿಂದ ಶಾಸಕ ರಾಜಾ ಸಿಂಗ್ ಅಮಾನತು
Advertisement
Advertisement
ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಚಕ್ರವರ್ತಿ ಅವರು ಆಗಸ್ಟ್ 20 ರಂದು ಬೆದರಿಕೆ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ರವನ್ನು ಬಪ್ಪಾ ಚಟರ್ಜಿ ಹೆಸರಿನಲ್ಲಿ ಕಳುಹಿಸಲಾಗಿದೆ. ಸೋಮವಾರ ಬೆದರಿಕೆ ಪತ್ರ ಬಂದಿರುವ ಬಗ್ಗೆ ಕುರಿತು ಸಿಬಿಐ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ನೀಡಿದರು. ಬಳಿಕ ಅವರು ಈ ಬಗ್ಗೆ ಕೋಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಕೋಟಿ ಕೋಟಿ ನಮನ – ಸಚಿವ ಸುಧಾಕರ್
Advertisement
ತನ್ನನ್ನು ಹಾಗೂ ತನ್ನ ಕುಟುಂಬವನ್ನು ಎನ್‌ಡಿಪಿಎಸ್ ಪ್ರಕರಣ(ಡ್ರಗ್ಸ್ ಪ್ರಕರಣ)ದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ನ್ಯಾಯಮೂರ್ತಿ ಚಕ್ರವರ್ತಿ ತಿಳಿಸಿದ್ದಾರೆ. ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡದಿದ್ದರೆ, ನನ್ನ ಕುಟುಂಬವನ್ನು ಡ್ರಗ್ ಪ್ರಕರಣದಲ್ಲಿ ಸಿಲುಕಿಸಲಾಗುವುದು ಎಂದು ಪತ್ರದಲ್ಲಿ ಬರೆಯಲಾಗಿದೆ. ಬಪ್ಪಾ ಚಟರ್ಜಿ ಎಂಬ ವ್ಯಕ್ತಿಯಿಂದ ಈ ಬೆದರಿಕೆ ಪತ್ರ ಬಂದಿರುವುದಾಗಿ ತಿಳಿಸಿದರು.