ಚಿಕ್ಕಬಳ್ಳಾಪುರ: ಮಡಿಕೇರಿ ಚಲೋ ರದ್ದು ಮಾಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸಚಿವ ಸುಧಾಕರ್ ಕೋಟಿ-ಕೋಟಿ ನಮನ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಡವಾಗಿ ಆದರೂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯ ಆಗಿದ್ದಕ್ಕೆ ಕೋಟಿ ನಮನ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಎಲ್ಲರೂ ಸುರಕ್ಷಿತವಾಗಿ ಇರಬೇಕು. ಕರುನಾಡು ಶಾಂತಿಯುತ ರಾಜ್ಯ, ರಾಜ್ಯದ ಹಿರಿಮೆ ಹೆಚ್ಚು ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣಕ್ಕೆ- ಮದುವೆಯ ಫೋಟೋನಾ ಬಿಜೆಪಿಯವ್ರು ಎಡಿಟ್ ಮಾಡಿದ್ದಾರೆ: ಜೀವಿಜಯ
Advertisement
Advertisement
ಕೊಡಗಿನಲ್ಲಿ ನಾಳೆಯಿಂದ ನಿಷೇಧಾಜ್ಞೆ: ಕೊಡಗು ಜಿಲ್ಲೆಯಲ್ಲಿ ಮೊಟ್ಟೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ಬಿಜೆಪಿ ಜಿಲ್ಲಾ ಸಮಾವೇಶ ಹಮ್ಮಿಕೊಂಡಿರುವ ದಿನವೇ ಕಾಂಗ್ರೆಸ್ ಸಹ `ಮಡಿಕೇರಿ ಚಲೋ’ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ನಾಳೆಯಿಂದ ಆ.27ರ ಸಂಜೆ 6 ಗಂಟೆವೆರೆಗ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ 4 ದಿನಗಳ ಕಾಲ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ನಿಷೇಧಾಜ್ಞೆ- ಮದ್ಯ ಮಾರಾಟ ನಿಷೇಧ
Advertisement
Advertisement
ಇದೇ ವೇಳೆ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಹಾಗೇ ಮುಂದುವರಿಯಬೇಕು. ಇದು ನಮ್ಮ ಹಾಗೂ ಜನರ ಅಭಿಪ್ರಾಯವೂ ಆಗಿದೆ. ಆದ್ರೆ ಜಿಲ್ಲಾ ಕೇಂದ್ರದ ವಿಷಯ ಬಂದಾಗ ಹೋರಾಟಗಾರರು ಸಂಘ ಸಂಸ್ಥೆಗಳು ಕೆಲವರು ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಅಗಬೇಕು ಅಂತ ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡೋಣ ತಿಳಿಸಿದ್ದಾರೆ.