ಬೆಂಗಳೂರು: ಕೋಟಿ ಹೃದಯಗಳ ಪ್ರಾರ್ಥನೆ ಕೊನೆಗೂ ಜಯಿಸಿದೆ. ಗುಣಮುಖವಾಗಿ ಮೊದಲಿನಂತಾಗಲಿ ಅನ್ನೋ ಕೋಟ್ಯಂತರ ಮನಸ್ಸುಗಳ ಆಸೆ ಈಡೇರಿದೆ.
ಏಪ್ರಿಲ್ 28 ರಂದು ಸುಂಕದಕಟ್ಟೆಯಲ್ಲಿ ಯುವತಿ ಆ್ಯಸಿಡ್ ದಾಳಿಗೆ ಒಳಗಾಗಿ ಸೆಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಯುವತಿಯನ್ನ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಗೆ ಬರೋಬ್ಬರಿ 16 ದಿನಗಳ ನಿರಂತರ ಹೋರಾಟದಲ್ಲಿ ಯುವತಿ ಗೆದ್ದು ಬಂದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಡುವೆ, ಪ್ರತೀ ಕ್ಷಣವೂ ಏನೋ ಅನ್ನೋ ಆತಂಕ ಇದೀಗ ಇಲ್ಲ. ಬರ್ನಿಂಗ್ ಸ್ಪೆಷಲ್ ವಾರ್ಡ್ ನಲ್ಲಿ ಯುವತಿ ಆರೈಕೆಯಲ್ಲಿದ್ದಾರೆ. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ
Advertisement
Advertisement
ಯುವತಿ ಸ್ವಲ್ಪ ಸ್ವಲ್ಪವೇ ಅನ್ನವನ್ನು ಸೇವಿಸೋಕೆ ಶುರು ಮಾಡಿದ್ದಾರೆ. ಡ್ರೈ ಫ್ರೂಟ್ಸ್ ಪುಡಿ ಮಾಡಿ, ಸರಿ ಜೊತೆ ಬೆರೆಸಿ ಕೊಡೋಕೆ ಸಹ ಡಾಕ್ಟರ್ ಹೇಳಿದ್ದಾರೆ. ಮುಖದ ಮುಂಭಾಗ ಮಾತ್ರ ಆಸಿಡ್‍ನಿಂದ ಸುಟ್ಟಿಲ್ಲ, ಮುಖದ ಎಡ ಮತ್ತು ಬಲಭಾಗ ಸುಟ್ಟಿದೆ ಅಂತಿದ್ದಾರೆ. ಇದಲ್ಲದೆ ಕಿವಿಯೊಂದು ತುಂಬಾನೆ ಹಾನಿಯಾಗಿದೆ. ಇನ್ನೂ 10% ನಷ್ಟು ಸ್ಕಿಮ್ ಟ್ರ್ಯಾನ್ಸ್ ಪ್ಲಾಂಟೇಷನ್ ಸರ್ಜರಿ ನಡೆಸಬೇಕಿದೆ. ಸದ್ಯ ಯುವತಿ ಮಾತನಾಡಿಸುತ್ತಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
Advertisement
Advertisement
ಯುವತಿ ಗುಣಮುಖಳಾಗಲಿ ಅನ್ನೋದು ನಮ್ಮೆಲ್ಲರ ಆಶಯವಾಗಿತ್ತು. ಕನ್ನಡಿಗರ ಪ್ರಾರ್ಥನೆ ಕೊನೆಗೂ ಕೈ ಗೂಡಿದೆ. ಕುಟುಂಬ ತುಸು ನೆಮ್ಮದಿಯಾಗಿದೆ.