ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರದಲ್ಲಿ ಇಲ್ಲಿಯವರೆಗೆ 130ಕ್ಕೂ ಅಧಿಕ ಪ್ರಮುಖ ಸ್ಥಾನಗಳಿಗೆ ಇಂಡೋ ಅಮೆರಿಕರನ್ನರನ್ನು ನೇಮಿಸಿದ್ದಾರೆ. ಈ ಮೂಲಕ ಬೈಡನ್ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.
ಅಮೆರಿಕಾದ ಜನಸಂಖ್ಯೆಯಲ್ಲಿ ಭಾರತೀಯ ಸಮೂದಾಯದ ಪ್ರಮಾಣ ಶೇ.1ರಷ್ಟಿದ್ದು, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಸಮೂದಾಯಕ್ಕೆ ನೀಡಿದ್ದ ಭರವಸೆಯನ್ನು ಪೂರೈಸಿದ್ದಾರೆ. ಈ ಮೂಲಕ ಹಿಂದಿನ 2 ಅಧ್ಯಕ್ಷರ ದಾಖಲೆಯನ್ನು ಮುರಿದಿದ್ದಾರೆ.
Advertisement
Advertisement
ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರದಲ್ಲಿ 80ಕ್ಕೂ ಹೆಚ್ಚು ಇಂಡೋ ಅಮೆರಿಕರಿದ್ದರೆ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ 60ಕ್ಕೂ ಅಧಿಕ ಇಂಡೋ ಅಮೆರಿಕರನ್ನು ನೇಮಿಸಿದ್ದರು. ಇದನ್ನೂ ಓದಿ: ಇಂದು ಒಂದೇ ದಿನ 155 ರೈಲು ಕ್ಯಾನ್ಸಲ್ – ರದ್ದುಗೊಂಡಿರುವ ರೈಲುಗಳ ಪಟ್ಟಿ ಇಲ್ಲಿದೆ
Advertisement
ಆದರೆ ಈ ಬಾರಿ ಬೈಡನ್ ನೇತೃತ್ವದ ಸರ್ಕಾರದಲ್ಲಿ 130ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಕೆಲಸ ಮಾಡುತ್ತಿದ್ದಾರೆ. ಯುಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ನಾಲ್ವರು ಸೇರಿದಂತೆ ವಿವಿಧ ರಾಜ್ಯ ಮತ್ತು ಫೆಡರಲ್ ಹಂತಗಳಲ್ಲಿ 40ಕ್ಕೂ ಅಧಿಕ ಇಂಡೋ ಅಮೆರಿಕನ್ನರು ಚುನಾಯಿತರಾಗಿದ್ದಾರೆ. 20ಕ್ಕೂ ಹೆಚ್ಚು ಇಂಡೋ ಅಮೆರಿಕನ್ನರು ಯುಎಸ್ ಕಂಪನಿಗಳ ಪ್ರಮುಖ ಹುದ್ದೆಯಲ್ಲಿದ್ದಾರೆ.
Advertisement
ಅಮೆರಿಕಾ ಮೂಲದ ಜಾಗತಿಕ ಸಂಸ್ಥೆಯಾದ ಇಂಡಿಯಾಸ್ಪೊರಾ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕ ಎಂ.ಆರ್.ರಂಗಸ್ವಾಮಿ ಈ ಬಗ್ಗೆ ಮಾತನಾಡಿ, ಇಂಡೋ ಅಮೆರಿಕನ್ನರು ತಮ್ಮ ಸೇವಾ ಮನೋಭಾವದಿಂದ ಗಮನಸೆಳೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡ್ತೀವಿ – ಅಶೋಕ್ ಘೋಷಣೆ