ಬೆಂಗಳೂರು: ತಿಂಡಿ ವ್ಯವಸ್ಥೆ ಆಯ್ತು.. ಊಟದ ವ್ಯವಸ್ಥೆ ಆಯ್ತು.. ಈಗ ಮಲಗಲು ವ್ಯವಸ್ಥೆ ಅಂತೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ವಿಶ್ರಾಂತಿ ಮಾಡಲು ಸ್ಪೀಕರ್ ಯು.ಟಿ.ಖಾದರ್ ಹೊಸ ಐಡಿಯಾ ಮಾಡಿದ್ದಾರೆ. ಲಾಂಜ್‌ನಲ್ಲಿ recliner chair ಹಾಕಿಸಿದ್ದು, ಅದರ ಪ್ರಯೋಜನ ಪಡೆಯುವಂತೆ ಸ್ಪೀಕರ್ ಖಾದರ್ (U.T.Khadar) ಸೂಚಿಸಿದ್ದಾರೆ.
ವಿಧಾನಸಭೆಯಲ್ಲಿ ಇವತ್ತು ಘೋಷಣೆ ಮಾಡಿದ ಸ್ಪೀಕರ್, ತಿಂಡಿ, ಊಟ ವ್ಯವಸ್ಥೆ ಮಾಡಿದ್ವಿ. ಈಗ ಕೆಲ ಶಾಸಕರು ಊಟ ಮಾಡಿ ಮಲಗಲು ಎಲ್‌ಹೆಚ್‌ಗೆ ಹೋಗಿ ಬರುತ್ತೇವೆ ಅಂತೇಳಿ ಹೋಗ್ತಿದ್ದಾರೆ. ಕೆಲವರು ಬರುವುದೇ ಇಲ್ಲ. ಹಾಗಾಗಿ ಶಾಸಕರು ವಿಶ್ರಾಂತಿ ಮಾಡಲು ಲಾಂಜ್‌ನಲ್ಲಿ recliner chair ಹಾಕಿಸಿದ್ದೇವೆ. ಇಲ್ಲೇ ಮಲಗಿ, ಬೇಕಾದಾಗ ಕರೆಯುತ್ತೇವೆ ಎಂದು ಖಾದರ್ ಹೇಳಿದರು. ಇದನ್ನೂ ಓದಿ: ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಅನ್ನೋ ಸಿದ್ದರಾಮಯ್ಯ ಮಾತನ್ನ ಯಾರೂ ನಂಬಲ್ಲ: ಸಿ.ಟಿ ರವಿ
ಇನ್ನು ಇದೇ ವೇಳೆ ಶಾಸಕರು ಪಿಎಗಳನ್ನ ವಿಧಾನಸಭೆ ಲಾಂಜ್‌ಗೆ ಕರೆದುಕೊಂಡು ಬರಬೇಡಿ. ಶಾಸಕರು ಕೂರಲು ಜಾಗ ಇರಲ್ಲ. ಈ ವಿಚಾರದಲ್ಲಿ ಶಾಸಕರು ಮಾರ್ಷಲ್‌ಗಳ ಜೊತೆ ವಾಗ್ವಾದ ಮಾಡಬೇಡಿ ಎಂದು ಸ್ಪೀಕರ್ ಸೂಚಿಸಿದರು.