ಚಪಾತಿಯನ್ನು ಮಕ್ಕಳು, ವಯಸ್ಸಾದವರು ಅನ್ನದೇ ಎಲ್ಲರೂ ಇಷ್ಟಪಟ್ಟು ತಿಂತಾರೆ.. ಅದರಲ್ಲೇನು ವಿಶೇಷ ಅಂತಿರಾ? ನಾವಿಂದು ವಿಶೇಷ ರುಚಿಯ ಪಾಲಕ್-ಪನ್ನೀರ್ ಚಪಾತಿ ಮಾಡೋದು ಹೇಗಂತಾ ತಿಳಿದ್ಕೊಳ್ಳೋಣ ಬನ್ನಿ.
ಪಾಲಕ್-ಪನ್ನೀರ್ ಚಪಾತಿ ಮಾಡೋಕೆ ಏನೆಲ್ಲಾ ಬೇಕು?
ಪಾಲಕ್ ಸೊಪ್ಪು
ಪನ್ನೀರ್- 100 ಗ್ರಾಂ
ಗೋಧಿ ಹಿಟ್ಟು
ಹಸಿ ಮೆಣಸಿನ ಕಾಯಿ
ಹಸಿ ಶುಂಠಿ
ಎಣ್ಣೆ
ತುಪ್ಪು (ರುಚಿಗೆ ತಕ್ಕಷ್ಟು)
ಉಪ್ಪು (ರುಚಿಗೆ ತಕ್ಕಷ್ಟು)
ಪಾಲಕ್-ಪನ್ನೀರ್ ಚಪಾತಿ ಮಾಡೋದು ಹೇಗೆ?
ಮೊದಲು ಪಾಲಕ್ ಸೊಪ್ಪು, ಪನ್ನೀರ್, ಹಸಿ ಮೆಣಸು, ಹಸಿ ಶುಂಠಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‌ಗೆ ಹಾಕಿ, ಇನ್ನೊಂದು ಬೌಲ್‌ಗೆ ಗೋಧಿ ಹಿಟ್ಟು ಹಾಕಿಕೊಂಡು ನಂತರ ಪುಡಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಗಳನ್ನು ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಮಿಕ್ಸ್ ಮಾಡಿ, ಚಪಾತಿ ಹಿಟ್ಟು ಹದ ಮಾಡುವಂತೆ ಹದಕ್ಕೆ ಮಾಡಿಕೊಳ್ಳಬೇಕು. ಪಾಲಕ್ ಸೊಪ್ಪಿನ ಈ ಪೇಸ್ಟ್‌ನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಹದ ಮಾಡಿಕೊಳ್ಳಬೇಕು. ಹಾಗೆ ಎಣ್ಣೆ ಹಾಕಿಯೂ ಕಲಸಿಕೊಂಡು, 15 ನಿಮಿಷ ಮುಚ್ಚಿ ಇಡಬೇಕು.
15 ನಿಮಿಷಗಳ ಬಳಿಕ ಇದು ಹಸಿರು ಬಣ್ಣದಲ್ಲಿ ಮೃದುವಾಗಿ ಚಪಾತಿ ಮಾಡಲು ತಯಾರಾಗಿರುತ್ತದೆ. ಇದನ್ನು ಉಂಡೆ ಮಾಡಿಕೊಂಡು ಲಟ್ಟಣಿಗೆ ಬಳಸಿ ಚಪಾತಿ ತಯಾರಿಸಬಹುದು.