Connect with us

Bengaluru City

ಕರ್ನಾಟಕ ಬಂದ್ ವಿಫಲಗೊಂಡಿದ್ದು ಯಾಕೆ?

Published

on

ಬೆಂಗಳೂರು: ಕನ್ನಡ ಒಕ್ಕೂಟಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್‍ಗೆ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಕೋಲಾರ ಹುಬ್ಬಳ್ಳಿಯಲ್ಲಿ ಬಂದ್ ಬಿಸಿ ಹೆಚ್ಚಿತ್ತೇ ವಿನಾಃ ಮತ್ಯಾವ ಜಿಲ್ಲೆಯಲ್ಲೂ ಬಂದ್ ಬಿಸಿ ಕಾಣಲಿಲ್ಲ.

ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ, ಎತ್ತಿನಹೊಳೆ, ಮಹದಾಯಿ, ಮೇಕೆದಾಟು ಯೋಜನೆ ಆಗ್ರಹಿಸಿ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದರು. ಆದರೆ ಕನ್ನಡ ಒಕ್ಕೂಟ ಈ ಉದ್ದೇಶವನ್ನ ಆಗ್ರಹಿಸಿದ ರೀತಿಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾದ ಕಾರಣ ಬಂದ್ ವಿಫಲವಾಗಿದೆ.

ವಿಫಲವಾಗಲು ಕಾರಣ ಏನು?
1. ವಾಟಾಳ್ ನಾಗರಾಜ್ ಮೊದಲು ಕರ್ನಾಟಕ ಬಂದ್ ಎಂದು ಘೋಷಿಸಿ ನಂತರ ಕನ್ನಡ ಸಂಘಟನೆಗಳ ಜೊತೆ ಚರ್ಚೆ ನಡೆಸುತ್ತಾರೆ ಎನ್ನುವ ಆರೋಪ.
2. ಎಲ್ಲಾ ಸಮಸ್ಯೆಗಳಿಗೂ ಬಂದ್ ಪರಿಹಾರ ಎಂಬಂತೆ ಬಳಕೆಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.

3. ಹೋರಾಟದ ಮೊದಲ ಹಂತವಾಗಿ ಸಂಬಂಧಪಟ್ಟ ಇಲಾಖೆಗಳ ಸಚಿವರುಗಳ ಜೊತೆ ಸರಿಯಾದ ಚರ್ಚೆ ಆಗದೇ ಇರುವುದು.
4. ಬೆಂಗಳೂರಿನಲ್ಲಿ ಕೂತು ನಿರ್ಧಾರ ಮಾಡುವ ನಾಯಕರುಗಳು, ರಾಜ್ಯದ ಪ್ರದೇಶವಾರು ಸಂಘ ಸಂಸ್ಥೆಗಳನ್ನ ಪರಿಗಣಿಸುತ್ತಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

5. ಏನೇ ಆದ್ರೂ ಕೊನೆಗೆ ಜನರ ಮೇಲೆಯೇ ಬಂದ್ ಬರೆ ಬೀಳತ್ತೆ ಎನ್ನುವ ನಿರ್ಧಾರಕ್ಕೆ ಬಂದಿರುವ ಜನ ಬಂದ್ ಬೆಂಬಲಿಸುತ್ತಿಲ್ಲ.
6. ವಿಶೇಷವಾಗಿ ಕರ್ನಾಟಕ ಬಂದ್ ವಿಚಾರ ಬಂದಾಗ ಬಹಳಷ್ಟು ಜನ ಕನ್ನಡಪರ ಕಳಕಳಿ ಹೊಂದಿರುವ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಬೆಂಬಲಿಸಿ ಪೋಸ್ಟ್/ಟ್ವೀಟ್ ಗಳನ್ನು ಹಾಕುತ್ತಿದ್ದರು. ಆದರೆ ಈ ಬಾರಿ ಕರೆ ನೀಡಿದ ಬಂದ್‍ಗೆ ಈ ವ್ಯಕ್ತಿಗಳು ಹೆಚ್ಚಿನ ಆಸಕ್ತಿ ತೋರಿಸದೇ ಬಂದ್ ವಿರೋಧಿಸಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

ಇದನ್ನೂ ಓದಿ: ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

 

https://youtu.be/5fg4AvaKFmM

https://youtu.be/QUgrRVs1kEo

https://youtu.be/RtwzcEjVDT0

Click to comment

Leave a Reply

Your email address will not be published. Required fields are marked *