Connect with us

Bengaluru City

ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

Published

on

ಬೆಂಗಳೂರು: ಬಂದ್ ಗೆ ಬೆಂಬಲ ನೀಡದವರು ಕನ್ನಡ ವಿರೋಧಿಗಳು ಅಂತಾ ತೀರ್ಮಾನ ಮಾಡಲು ವಾಟಾಳ್ ನಾಗರಾಜ್ ಅವರಿಗೆ ಕರ್ನಾಟಕವನ್ನು ಬರೆದುಕೊಟ್ಟಿಲ್ಲ. ಕನ್ನಡದ ಕೆಲಸ ಮಾಡುವವರೆಲ್ಲರೂ ಕನ್ನಡಾಭಿಮಾನಿಗಳೇ ಅಂತಾ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ ನಡೆಸಿದ್ದಾರೆ.

ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು ಇಂದು ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಬಂದ್‍ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಗೌಡ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಯಾರೋ ಒಬ್ಬ ಕನ್ನಡ ಚಳವಳಿ ಅಥವಾ ಹೋರಾಟದಲ್ಲಿ ಭಾಗವಹಿಸಿಲ್ಲ ಅಂದ ತಕ್ಷಣ ಆತ ಕನ್ನಡ ವಿರೋಧಿಯಾಗಲು ಸಾಧ್ಯವಿಲ್ಲ. ಕರ್ನಾಟದಲ್ಲಿ ಕನ್ನಡದ ಬಗ್ಗೆ ಅಭಿಮಾನವಿರುವ ಎಲ್ಲರೂ ಕನ್ನಡಾಭಿಮಾನಿಗಳೇ ಆಗಿರುತ್ತಾರೆ. ಹೋರಾಟಗಾರರಷ್ಟೇ ಕನ್ನಡದ ಅಭಿಮಾನಿಗಳು, ಕನ್ನಡದ ಪರವಾಗಿ ಇರುವವರು ಅಂತಾ ಅರ್ಥ ಅಲ್ಲ. ನಮಗಿಂತಲೂ ಚೆನ್ನಾಗಿ ಕನ್ನಡವನ್ನು ಪ್ರೀತಿಸೋರು, ಬಲ್ಲವರು ಇದ್ದಾರೆ ಅಂತಾ ಹೇಳಿದ್ರು.

ಬಂದ್‍ನಲ್ಲಿ ಸಫಲರು ಯಾರು, ವಿಫಲರು ಯಾರು ಅಂತಾ ಹೇಳೋದಕ್ಕಿಂತ ಎಲ್ಲ ಸಂದರ್ಭಗಳಲ್ಲೂ ಜನ ನಾವು ಹೇಳಿದ ಹಾಗೇ ಕೇಳ್ತಾರೆ ಅನ್ನೋ ಅಹಂಕಾರದ ಗುಣ ಸರಿಯಾದ ಕ್ರಮವಲ್ಲ. ಇದನ್ನು ಜನರ ಪರವಾದ ಬಂದ್ ಅಂತಾ ಹೇಗೆ ಹೇಳ್ತೀರಿ. ಜನರ ಪರವಾದ ಬಂದ್ ಅಂತಾ ಆದ್ರೆ ಜನಈ ಬಂದ್ ಸ್ವೀಕರಿಸುತ್ತಿದ್ದರು ಅಂತಾ ಹೇಳಿದ್ರು.

ಇದನ್ನೂ ಓದಿ: ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ


ಸಂಸದರಿಗೆ ಬಿಸಿ ಮುಟ್ಟಿಸಿ: ಹೋರಾಟಗಾರರಿಗೆ ನಾನಾ ರೀತಿಯ ಹೋರಾಟದ ಮಾರ್ಗಗಳಿರುತ್ತವೆ. ಎಲ್ಲೋ ಒಂದು ಬಾರಿ ಜನ ನಮಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಅಂದ್ರೆ ಅದನ್ನು ದುರುಪಯೋಗಪಡಿಸಿಕೊಳ್ಳೋದು ಸರಿಯಲ್ಲ. ಪ್ರತೀ ಸಾರಿನೂ ಬಂದ್ ಬಂದ್ ಅಂತಾ ಕುಳಿತುಕೊಂಡ್ರೆ ಶ್ರೀ ಸಾಮಾನ್ಯರ ಮೇಲೆ ಆಗುವ ಪರಿಣಾಮದ ಹೊಣೆಯನ್ನು ಯಾರು ಹೊತ್ತು ಮಾತನಾಡಲು ಸಾಧ್ಯವಿದೆ? ಕೇಂದ್ರಕ್ಕೆ ಮುಟ್ಟಿಸಲು ನಮ್ಮ ರಾಜ್ಯದಿಂದ 28 ಜನ ಲೋಕಸಭಾ ಸದಸ್ಯರನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇವಲ್ವಾ. ಹೀಗಾಗಿ ಕೇಂದ್ರಕ್ಕೆ ಮುಟ್ಟಿಸಬೇಕಾದ್ರೆ ಮೊದಲು ಅವರಿಗೆ ಬಿಸಿ ಮುಟ್ಟಿಸಬೇಕು. ಅವರ ಮನೆ ಮುಂದೆ ಹೋಗಿ ಧರಣಿ ಮಾಡೋಣ. ಈ ಮೂಲಕ ಅವರನ್ನು ಎಚ್ಚರಗೊಳಿಸೋಣ. ರಾಜ್ಯದ ಸಮಸ್ಯೆಯ ಬಗ್ಗೆ ಜಾಗೃತಿಗೊಳಿಸೋಣ. ಕೇಂದ್ರಕ್ಕೆ ಯಾವ ರೀತಿ ರಾಜ್ಯದ ಸಮಸ್ಯೆಯನ್ನು ಮುಟ್ಟಿಸಬೇಕು ಅದೇ ರೀತಿ ತಲುಪಿಸೋಣ. ಇಲ್ಲವೇ ಸಾವಿರಾರು ಸಂಖ್ಯೆಯಲ್ಲಿ ದೆಹಲಿಗೆ ಹೋಗಿ ಅಲ್ಲಿಯ ಜಂತರ್ ಮಂತರ್ ಮುಂದೆ ಕುಳಿತು ಪ್ರತಿಭಟನೆ ಮಾಡೋಣ ಅಂತಾ ತಿಳಿ ಹೇಳಿದ್ರು.

ಪ್ರತಿಷ್ಠೆ ಬಿಡಿ, ಒಮ್ಮತವಿರಲಿ: ಯಾವುದೇ ಒಂದು ಹೋರಾಟಕ್ಕೂ ಒಮ್ಮತವಿರಬೇಕು. ಒಗ್ಗಟ್ಟಿನಿಂದ ನಾವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರತೀ ಬಾರಿನೂ ನಾನು ಇದೇ ಮಾತನ್ನ ಹೇಳ್ತಾ ಇದ್ದೀನಿ. ನಾವು ನಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಒಮ್ಮತದ ಹೋರಾಟ ಮಾಡೋಣ. ರಾಜ್ಯದ ಜನರ ಹಿತಕ್ಕೋಸ್ಕರ ಪ್ರತಿಭಟನೆಗಳನ್ನು ಮಾಡಬೇಕಾದ್ರೆ ನಾವು ನಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಬಿಡಬೇಕು. ಒಟ್ಟಿನಲ್ಲಿ ಒಗ್ಗಟ್ಟಿನಿಂದ ಈ ನಾಡು ಕಟ್ಟುವ ಕೆಲಸ ಮಾಡಬೇಕು. ಒಮ್ಮತ ಅಂದ್ರೆ ನನ್ನಿಂದ, ನಾನು, ನನ್ನ ಮಾತನ್ನು ಎಲ್ಲರೂ ಕೇಳಬೇಕು ಅನ್ನೋ ಪ್ರತಿಷ್ಠೆ ಬಿಟ್ಟು ಬಿಡಬೇಕು ಅಂದ್ರು.

ಇದನ್ನೂ ಓದಿ: ಕರ್ನಾಟಕ ಬಂದ್: ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಗೆ ನೋಟಿಸ್

 

ಬಂದ್‍ಗೆ ವಿರೋಧವಿಲ್ಲ: ಇಂದಿನ ರಾಜ್ಯ ಬಂದ್ ಗೆ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ನನಗೆ ಬಂದ್ ಇಷ್ಟ ಇಲ್ಲ. ಅದಕ್ಕಾಗಿ ನಾನು ಬಂದ್ ನಿಂದ ದೂರ ಉಳಿದ್ದೀನಿ. ಆದ್ರೆ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕಾರ್ಯಕರ್ತರಿಗೆ ಕರೆ ಮಾಡಿ ಬಂದ್ ಗೆ ಬೆಂಬಲ ಸೂಚಿಸಲು ತಿಳಿಸಿದ್ದೇನೆ. ಯಾಕಂದ್ರೆ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಭೆಯ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಕನ್ನಡಿಗರನ್ನು ಜೈಲಿಗೆ ಹಾಕಿದ್ರು. ಅಂದು ಅವರನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದೆ. ಅಂದು ಅವರಲ್ಲಿ ಕಣ್ಣೀರು ಹಾಕಿದ್ದನ್ನು ನೋಡಿದ್ರೆ ನಮಗೆ ಇಂತಹ ವ್ಯವಸ್ಥೆ ಬೇಕಾ ಅಂತಾ ಅನ್ನಿಸ್ತು. ಆದ್ರೆ ಯಾರು ಹೋಗಿ ಅವರನ್ನು ಜೈಲಲ್ಲಿ ನೋಡಿದ್ದಾರೆ ಅಂತಾ ಪ್ರಶ್ನಿಸಿದರು.

https://www.youtube.com/watch?v=fAzg4duUVEY

 

Click to comment

Leave a Reply

Your email address will not be published. Required fields are marked *