ಬೆಂಗಳೂರು: ಹಾಡಹಗಲೇ ಯಲಹಂಕದಲ್ಲಿ (Yalahanka) ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಕೇಸ್ನಲ್ಲಿ ಇಬ್ಬರು ಆರೋಪಿಗಳು ಶಾಮೀಲಾಗಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ (DCP Mithun Kumar) ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಲಹಂಕ ನ್ಯೂಟೌನ್ನಲ್ಲಿ ರಿಯಲ್ ಎಸ್ಟೇಟ್ ಕಂಪನಿ ಇದೆ. ಗೌರಿಬಿದನೂರುನಲ್ಲಿ ಮುಖ್ಯ ಕಚೇರಿ ಇದೆ. ನ.13ರ ಬೆಳಿಗ್ಗೆ 9:30ರ ಸುಮಾರಿಗೆ ಕೊಲೆಯಾಗಿದೆ. ಮೃತ ಚರಣ್ ಮತ್ತು ಅವರ ಪತ್ನಿ ಇಬ್ಬರು ಒಟ್ಟಿಗೆ ಬಂದಿದ್ದು, ಪತ್ನಿ ಕಾರಿನಿಂದ ಇಳಿದು ಒಳಗೆ ಹೋಗ್ತಿದ್ದಂತೆ ಚರಣ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಯಲಹಂಕದಲ್ಲಿ ಪತ್ನಿ ಎದುರೇ ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ
ಆರೋಪಿಗಳು ಯಾರು ಅನ್ನೋದು ಕೂಡ ಗೊತ್ತಾಗಿದೆ. ಅದಷ್ಟು ಬೇಗ ಯಾರು ಮಾಡಿದ್ದು, ಹಿಂದಿನ ಉದ್ದೇಶ ಏನು ಅನ್ನೋದು ತಿಳಿಯಲಿದೆ. ಕೊಲೆಯಾದ ಚರಣ್ ಈ ಹಿಂದೆ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ರು. ನಂತರ ಕೆಲಸ ಬಿಟ್ಟು ರಿಯಲ್ ಎಸ್ಟೇಟ್ ಮಾಡ್ತಿದ್ರು ಎಂದು ಮಾಹಿತಿ ನೀಡಿದ್ದಾರೆ.
