ದುಬೈ: ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಆರ್ಸಿಬಿಯ ಬಿ ತಂಡದ ಬೌಲರ್ಗಳನ್ನು ಬೆಂಡೆತ್ತಿ ಎಬಿ ಡಿವಿಲಿಯರ್ಸ್ ಶತಕ ಸಿಡಿಸಿ ಮಿಂಚಿದ್ದಾರೆ.
ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಎಲ್ಲಾ ತಂಡಗಳು ದುಬೈನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ. ಆರ್ಸಿಬಿ ಆಟಗಾರರು ತಮ್ಮಲ್ಲೆ ಎರಡು ತಂಡಗಳನ್ನು ಮಾಡಿಕೊಂಡು ಅಭ್ಯಾಸ ಪಂದ್ಯವಾಡಿದ್ದಾರೆ. ಹರ್ಷಲ್ ಪಟೇಲ್ ಎ ತಂಡದ ನಾಯಕಾಗಿ ಹಾಗೂ ದೇವದತ್ ಪಡಿಕ್ಕಲ್ ಬಿ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದನ್ನೂ ಓದಿ:ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಎ ತಂಡಕ್ಕೆ ಎಬಿ ಡಿವಿಲಿಯರ್ಸ್ 10 ಸಿಕ್ಸರ್, 7 ಬೌಂಡರಿ ಸಹಿತ ಕೇವಲ 46 ಎಸೆತಗಳಲ್ಲಿ ಸ್ಪೋಟಕ 104 ರನ್ ಗಳನ್ನು ಸಿಡಿಸಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ
ನಿಗದಿತ 20 ಓವರ್‍ನಲ್ಲಿ ಎ ತಂಡ 213 ರನ್ ಗಳಿಸಿ ಬೃಹತ್ ಟಾರ್ಗೆಟ್ ನೀಡಿದೆ. ಈ ಮೊತ್ತವನ್ನು ಬೆನ್ನತ್ತಿದ ಎ ತಂಡಕ್ಕೆ ನಾಯಕ ದೇವದತ್ ಪಡಿಕ್ಕಲ್ 21 ಎಸೆತಗಳಲ್ಲಿ 36 ರನ್ ಗಳಿಸಿ ಉತ್ತಮ ಆರಂಭ ನೀಡಿದ್ದಾರೆ. ಬಿರುಸಿನ ಬ್ಯಾಟಿಂಗ್ ಮಾಡಿದ ಕೆ.ಎಸ್ ಭರತ್ 47 ಎಸೆತಗಳಲ್ಲಿ ಭರ್ಜರಿ 95 ರನ್‍ಗಳನ್ನು ಚಚ್ಚಿ ಬಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಆಟಗಾರರು ಉತ್ತಮ ಫಾರ್ಮ್ ಕಂಡುಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದೆ.
ಸೆ.19 ರಂದು ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯೊಂದಿಗೆ ಎರಡನೇ ಹಂತದ ಐಪಿಎಲ್ ಗೆ ಚಾಲನೆ ದೊರೆಯಲಿದ್ದು, ಸೆ.20 ರಂದು ಆರ್ಸಿಬಿ, ಕೆಕೆಆರ್ ತಂಡವನ್ನು ಎದುರಿಸಲಿದೆ.