– RCB ಅಭಿಮಾನಿ ಅಂದ್ರೆ ನೀನು ಎಂದ ನೆಟ್ಟಿಗರು
ಲಕ್ನೋ: ಐಪಿಎಲ್‌ನಲ್ಲಿ ಆರ್‌ಸಿಬಿಗೆ (RCB) ಫ್ಯಾನ್ಸ್ ಕ್ರೇಜ್ ಜಾಸ್ತಿ. ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನ ಪ್ರದರ್ಶಿಸಿ ಗಮನ ಸೆಳೆಯುವವರೇ ಹೆಚ್ಚು. ಅಂಥದ್ದೊಂದು ಪ್ರಸಂಗ ಲಕ್ನೋದಲ್ಲಿ ಆರ್‌ಸಿಬಿ vs ಎಸ್‌ಆರ್‌ಹೆಚ್ ಪಂದ್ಯದ ವೇಳೆ ನಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯೊಬ್ಬ ಪ್ರದರ್ಶಿಸಿದ ಪ್ಲೆಕಾರ್ಡ್ ಗಮನ ಸೆಳೆದಿದೆ. ‘ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆಯಾಗಲ್ಲ’ ಎಂದು ಪ್ಲೆಕಾರ್ಡ್‌ನ್ನು ಅಭಿಮಾನಿಯೊಬ್ಬ ಪ್ರದರ್ಶಿಸಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಿಸ್.. ಕೊಹ್ಲಿಗೆ ಲಕ್ನೋದಲ್ಲಿ ಸಿಕ್ತು ಆರ್‌ಸಿಬಿ ಅಭಿಮಾನಿಗಳಿಂದ ‘ಟೆಸ್ಟ್ ಫೇರ್‌ವೆಲ್’
ಈತನ ಅಭಿಮಾನಕ್ಕೆ ಇತರೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜವಾದ ಆರ್‌ಸಿಬಿ ಅಭಿಮಾನಿ ನೀನು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈ ರೀತಿಯ ಪ್ರಸಂಗಗಳು ನಡೆಯುತ್ತಿರುವುದು ಇದೇ ಮೊದಲಲ್ಲ. 2022ರ ಸಂದರ್ಭದಲ್ಲೂ ಇಂತಹದ್ದೊಂದು ಸನ್ನಿವೇಶ ನಡೆದಿತ್ತು. ಆರ್‌ಸಿಬಿ ಟ್ರೋಪಿ ಗೆಲ್ಲೋವರೆಗೂ ಮದುವೆಯಾಗಲ್ಲ ಅಂತ ಮಹಿಳೆಯೊಬ್ಬರು ಪ್ಲೆಕಾರ್ಡ್ ಪ್ರದರ್ಶಿಸಿದ್ದರು.
2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ತೋರಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. ಪಾಯಿಂಟ್ ಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 42 ರನ್‌ಗಳ ಸೋಲು ಕಂಡಿತು. ಪ್ಲೇ-ಆಫ್ ಪ್ರವೇಶಿಸಿರುವ ಆರ್‌ಸಿಬಿ ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ಸನ್ ರೈಸರ್ಸ್ ಆರ್ಭಟಕ್ಕೆ ಆರ್‌ಸಿಬಿ ಬರ್ನ್ – ಹೈದರಾಬಾದ್‌ಗೆ 42 ರನ್‌ಗಳ ಜಯ, 3ನೇ ಸ್ಥಾನಕ್ಕೆ ಕುಸಿದ ಬೆಂಗಳೂರು