ನವದೆಹಲಿ: ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ಕಾರಣಕ್ಕಾಗಿ ಮಹಾರಾಷ್ಟ್ರ (Maharashtra) ಮೂಲದ ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ (Laxmi Cooperative Bank) ಲಿಮಿಟೆಡ್‍ನ ಪರವಾನಿಗೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರದ್ದು ಪಡಿಸಿದೆ.
Advertisement
ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಆರ್ಥಿಕವಾಗಿ ದುರ್ಬಲಗೊಂಡಿದ್ದು, ಬಂಡವಾಳ ಮತ್ತು ಗಳಿಕೆ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಹಾಗಾಗಿ ಆರ್‌ಬಿಐ ಇಂದಿನಿಂದ ಬ್ಯಾಂಕಿನ ವ್ಯವಹಾರವನ್ನು ಸ್ಥಗಿತಗೊಳಿಸಿ ಲೈಸನ್ಸ್ (Licence) ರದ್ದುಪಡಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಎಎಪಿ ಶಾಸಕ ಲಾಭ್ ಸಿಂಗ್ ಉಗೋಕೆ ತಂದೆ ಆತ್ಮಹತ್ಯೆಗೆ ಯತ್ನ!
Advertisement
Advertisement
ಬ್ಯಾಂಕ್ ಆರ್ಥಿಕವಾಗಿ ಸಮಸ್ಯೆಯಲ್ಲಿರುವುದರಿಂದಾಗಿ ಈ ಬಗ್ಗೆ ಮಹಾರಾಷ್ಟ್ರ ಸರ್ಕಾರಿ ಇಲಾಖೆ ಆಯುಕ್ತ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ಆರ್‌ಬಿಐಗೆ ಪತ್ರಬರೆದಿದ್ದರು. ಆ ಬಳಿಕ ಆರ್‌ಬಿಐ ಲೈಸನ್ಸ್ ರದ್ದು ಪಡಿಸಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬ್ಯಾಂಕ್ ಠೇವಣಿದಾರರಿಗೆ ಪೂರ್ಣ ಪ್ರಮಾಣದಲ್ಲಿ ವ್ಯವಹಾರವನ್ನು ನಡೆಸಲು ಸಹಕರಿಸಲು ಕಷ್ಟವಾಗಲಿದೆ. ಹಾಗಾಗಿ ಠೇವಣಿದಾರರ ಹಿತಾಸಕ್ತಿಯನ್ನು ಮನಗಂಡು ಈ ನಿರ್ಧಾರವನ್ನು ಆರ್‌ಬಿಐ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಇದನ್ನೂ ಓದಿ: PayCM ಅಂದ್ರೆ ಪೇ ಟು ಕಾಂಗ್ರೆಸ್ ಮೇಡಂ – ನಳಿನ್ ಕುಮಾರ್ ಕಟೀಲ್ ತಿರುಗೇಟು
Advertisement
Reserve Bank of India (RBI) cancels the licence of The Laxmi Co-operative Bank Ltd, Solapur, Maharashtra; depositors can claim up to Rs 5 lakhs, says RBI.
— ANI (@ANI) September 22, 2022
ಬ್ಯಾಂಕ್ ಲೈಸನ್ಸ್ ರದ್ದು ಪಡಿಸಿದ್ದರೂ ಈಗಾಗಲೇ ಬ್ಯಾಂಕ್‍ನಲ್ಲಿ ವ್ಯವಹಾರ ನಡೆಸುತ್ತಿದ್ದ ಠೇವಣಿದಾರರು, ಠೇವಣಿ ವಿಮೆ, ಸಾಲ ಖಾತರಿ ನಿಗಮದ ನಿಯಮದಂತೆ 5 ಲಕ್ಷ ರೂ.ವರೆಗೆ ಪಡೆಯಬಹುದಾಗಿದೆ. ಈಗಾಗಲೇ ಬ್ಯಾಂಕ್ ನೀಡಿರುವ ಮಾಹಿತಿ ಆಧಾರದಲ್ಲಿ ಸುಮಾರು ಶೇ.99 ಠೇವಣಿದಾರರು ಬ್ಯಾಂಕ್‍ನಲ್ಲಿ ಇಟ್ಟಿರುವ ಸಂಪೂರ್ಣ ಠೇವಣಿ ಮೊತ್ತವನ್ನು ಡಿಐಸಿಜಿಯಿಂದ ಪಡೆಯಬಹುದಾಗಿದೆ.