‘ದೇವರ’ ಸಿನಿಮಾದ ಬಳಿಕ ಜ್ಯೂ.ಎನ್ಟಿಆರ್ (Jr.Ntr) ಮುಂದಿನ ಚಿತ್ರಕ್ಕಾಗಿ ‘ಕೆಜಿಎಫ್ 2’ (KGF 2) ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ತಾರಕ್ಗೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಇದನ್ನೂ ಓದಿ:ಅಬುಧಾಬಿ ಮಂದಿರಕ್ಕೆ ಭೇಟಿ ನೀಡಿದ ರಜನಿಕಾಂತ್
Advertisement
ಜ್ಯೂ.ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ (Prashanthneel) ಕಾಂಬಿನೇಷನ್ನ ಈ ಸಿನಿಮಾಗೆ ’ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆ. ಇದೇ ಆಗಸ್ಟ್ನಿಂದ ಶೂಟಿಂಗ್ ಮಾಡೋದಾಗಿ ತಾರಕ್ ಹುಟ್ಟುಹಬ್ಬದ ದಿನ (ಮೇ 20) ಚಿತ್ರತಂಡ ತಿಳಿಸಿದೆ. ಸಿನಿಮಾ ಘೋಷಣೆಯ ನಂತರ ಜ್ಯೂ.ಎನ್ಟಿಆರ್ಗೆ ನಾಯಕಿ ಯಾರಾಗ್ತಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.
Advertisement
Advertisement
ಡ್ರ್ಯಾಗನ್ ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸ್ಟಾರ್ ನಾಯಕಿನೇ ಬೇಕು ಎಂದು ಚಿತ್ರತಂಡ ರಶ್ಮಿಕಾರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕೂ ತುಂಬಾನೇ ಪ್ರಾಮುಖ್ಯತೆ ಇದೆ. ಜ್ಯೂ.ಎನ್ಟಿಆರ್ಗೆ ಕನ್ನಡದ ನಟಿ ರಶ್ಮಿಕಾ ಸೂಕ್ತ ಎಂಬುದು ತಂಡದ ಅಭಿಪ್ರಾಯ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದು ಖಾತ್ರಿಯಾಗಿಲ್ಲ. ಚಿತ್ರತಂಡ ಈ ಕುರಿತು ಅಧಿಕೃತ ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ.
Advertisement
ಸದ್ಯ ಪ್ರಶಾಂತ್ ನೀಲ್ ಮತ್ತು ರಶ್ಮಿಕಾ ಮಂದಣ್ಣ ಕನ್ನಡದವರು. ಜ್ಯೂ.ಎನ್ಟಿಆರ್ ಕುಂದಾಪುರದವರಾಗಿದ್ದು, ಅವರಿಗೆ ಕನ್ನಡ ಭಾಷೆಯ ಮೇಲೆ ವಿಶೇಷ ಅಭಿಮಾನವಿದೆ. ಇದೀಗ 3 ಜನರು ಒಟ್ಟಿಗೆ ಕೆಲಸ ಮಾಡುವ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಒಂದು ವೇಳೆ, ಈ ಸುದ್ದಿ ನಿಜವೇ ಆದರೆ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ.
ಸದ್ಯ ಪುಷ್ಪ 2, ಅನಿಮಲ್ ಪಾರ್ಕ್, ರೈನ್ಬೋ, ಗರ್ಲ್ಫ್ರೆಂಡ್, ಸಿಖಂದರ್, ಕುಬೇರ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್ಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.