ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಬಾಲಿವುಡ್ (Bollywood) ಮತ್ತು ಸೌತ್ನಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ರಶ್ಮಿಕಾ ಏನೇ ಮಾಡಿದ್ದರೂ, ಅವರ ಬಗ್ಗೆ ಯಾರು ಏನೇ ಮಾತನಾಡಿದ್ದರು ಸಖತ್ ಸುದ್ದಿಯಾಗುತ್ತಿದೆ. ಇತ್ತೀಚಿಗೆ ಕ್ರಿಕೆಟರ್ ಶುಭಮನ್ ಗಿಲ್ಗೆ ರಶ್ಮಿಕಾ ಮೇಲೆ ಕ್ರಶ್ (Crush) ಎಂದು ಹೇಳಿರುವ ವಿಚಾರ ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು. ಈ ಬಗ್ಗೆ `ಪುಷ್ಪ’ ನಟಿ ರಿಯಾಕ್ಷನ್ ನೀಡಿದ್ದಾರೆ.
ರಶ್ಮಿಕಾ ಅವರು ಸಿನಿಮಾ ಮಾತ್ರವಲ್ಲದೇ ಸಾಕಷ್ಟು ಬ್ರ್ಯಾಂಡ್ ಪ್ರಮೋಷನ್ ಕೂಡ ಮಾಡ್ತಿದ್ದಾರೆ. ಇತ್ತೀಚಿಗೆ ಬ್ರ್ಯಾಂಡ್ ಪ್ರಮೋಷನ್ನಲ್ಲಿ ಭಾಗಿಯಾಗಿದ್ದ ವೇಳೆ ಪಾಪರಾಜಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ಅವರಿಗೆ ವಿವಿಧ ರೀತಿಯ ಪ್ರಶ್ನೆಗಳನ್ನ ಕೇಳಲಾಗಿದೆ. ಆಗ ಶುಭಮನ್ ಗಿಲ್ ಬಗ್ಗೆ ನಟಿಗೆ ಕೇಳಿದ್ದಾರೆ. ಇದನ್ನೂ ಓದಿ: ಮತ್ತೊಂದು ಮದುವೆ ಸಂಭ್ರಮದಲ್ಲಿ ಸ್ವರಾ ಭಾಸ್ಕರ್
ರಶ್ಮಿಕಾ ಅವರೇ ನೀವು ಎಲ್ಲರ ಕ್ರಶ್ ಆಗಿಬಿಟ್ಟಿದ್ದೀರಾ. ಕ್ರಿಕೆಟರ್ ಕ್ರಶ್ ಕೂಡ ಎಂದು ರಶ್ಮಿಕಾಗೆ ಕೇಳಿದ್ದಾರೆ. ಅದಕ್ಕೆ ನಟಿ ನಕ್ಕಿದ್ದಾರೆ ಅಷ್ಟೇ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಚೆಂದದ ನಗು ಬೀರಿ ಮುಂದೆ ಹೋಗಿದ್ದಾರೆ.
View this post on Instagram
ಸದ್ಯ ರಶ್ಮಿಕಾ (Rashmika Mandanna) ಅವರು ರಣ್ಬೀರ್ ಕಪೂರ್ (Ranbir Kapoor) ಜೊತೆ `ಅನಿಮಲ್’ (Animal) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ.