ಕೊನೆಗೂ ರಿಲೇಷನ್‌ಶಿಪ್‌ ಬಗ್ಗೆ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna 1 2

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಪುಷ್ಪ 2’ (Pushpa 2) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ‘ಪುಷ್ಪ 2’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಲವ್ ಲೈಫ್ ಬಗ್ಗೆ ನಟಿ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಭಾವಿ ಪತಿ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾಗಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ನಮ್ರತಾ, ದಿವ್ಯಾ ಉರುಡುಗ, ಖುಷಿ ಜಾಲಿ ವೆಕೇಷನ್

rashmika mandanna

ರಶ್ಮಿಕಾ ಜೊತೆ ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ (Sreeleela) ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ, ವೇದಿಕೆಯಲ್ಲಿ ಮದುವೆಗೆ ಸಂಬಂಧಿಸಿದ ಪ್ರಶ್ನೆಯನ್ನು ರಶ್ಮಿಕಾಗೆ ಕೇಳಲಾಯಿತು. ರಶ್ಮಿಕಾ ಸ್ವಲ್ಪ ಹೊತ್ತು ಯೋಚಿಸಿ ನಂತರ ನಗುತ್ತಲೇ ಅವರು ನಿಮಗೆಲ್ಲ ಅವರು ಗೊತ್ತು ಎಂದು ಸುಳಿವು ನೀಡಿದರು. ಇದನ್ನೂ ಓದಿ:‘ವಾರ್ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಐಟಂ ಡ್ಯಾನ್ಸ್?

ನೀವು ಚಿತ್ರರಂಗದ ಯಾರನ್ನಾದರೂ ಮದುವೆಯಾಗುತ್ತೀರಾ? ಅಥವಾ ಹೊರಗಿನವರಾ? ಎಂದು ಮತ್ತೆ ಕೇಳಿದಾಗ, ಅದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ರಶ್ಮಿಕಾ ನಸು ನಕ್ಕರು. ನಮಗೆ ಗೊತ್ತಿಲ್ಲ. ಒಂದು ಸಣ್ಣ ಸುಳಿವು ಕೊಡಿ ಎಂದು ಮತ್ತೆ ಪ್ರಶ್ನಿಸಿದಾಗ ಹಾಗೆ ಹೇಳುವುದು ಬೇಡ. ನಾನೇ ಖುದ್ದಾಗಿ ಒಂದು ದಿನ ಎಲ್ಲವನ್ನೂ ಹೇಳುತ್ತೇನೆ ಎಂದು ನಗುತ್ತಲೇ ರಶ್ಮಿಕಾ ತಿಳಿಸಿದರು.

rashmika mandanna 2

ರಶ್ಮಿಕಾ ಮಂದಣ್ಣ ಅವರ ಈ ಮಾತುಗಳು ಅಭಿಮಾನಿಗಳ ತಲೆ ಕೆಡಿಸಿದೆ. ಇತ್ತೀಚೆಗೆ ವಿಜಯ್ ದೇವರಕೊಂಡ (Vijay Devarakonda) ಸಹ ತಾವು ಸಿಂಗಲ್ ಅಲ್ಲ ಎಂದಿದ್ದರು. ಈಗ ರಶ್ಮಿಕಾ ಮಂದಣ್ಣ ಸಹ ಇದೇ ರೀತಿ ಮಾತನಾಡಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಬಹುತೇಕರು ರಶ್ಮಿಕಾ ಮತ್ತು ವಿಜಯ್ ಪ್ರೀತಿಯಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಈ ವಿಚಾರ ರಿವೀಲ್ ಮಾಡಬಹುದು ಎಂದು ಊಹಿಸುತ್ತಿದ್ದಾರೆ.

Share This Article