ಕನ್ನಡದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna) ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಇತ್ತೀಚಿನ ಬಾಲಿವುಡ್ (Bollywood) `ಗುಡ್ ಬೈ’ (Good Bye) ಚಿತ್ರದ ಸೋಲಿನ ನಂತರ ಇದೀಗ ಸ್ಟಾರ್ ನಟನ ಐಟಂ ಡ್ಯಾನ್ಸ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ ಪುಷ್ಪ ನಟಿ.
`ಪುಷ್ಪ’ (Pushpa Film) ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚ್ತಿರುವ ರಶ್ಮಿಕಾ ಮಂದಣ್ಣಗೆ (Rashmika) ಈಗ ಲಕ್ ಕೈ ಕೊಟ್ಟಂತಿದೆ. ಸ್ಟಾರ್ ವ್ಯಾಲ್ಯೂ ಇರುವ ನಟಿ ಈಗ ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಸೌಂಡ್ ಮಾಡುತ್ತಿದೆ. ಸ್ಟಾರ್ ಹೀರೋಯಿನ್ ಆಗಿದ್ರು ಐಟಂ ಹಾಡಿಗೆ ಓಕೆ ಅಂದಿದ್ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು (Mahesh Babu) ಜತೆ ಪೂಜಾ ಹೆಗ್ಡೆ, ಶ್ರೀಲೀಲಾ (Sreeleela) ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೇ ಚಿತ್ರದಲ್ಲಿ ರಶ್ಮಿಕಾ ಐಟಂ ಹಾಡಿಗೆ ಹೆಜ್ಜೆ ಹಾಕಲು ಓಕೆ ಅಂದಿದ್ದಾರೆ. `ಪುಷ್ಪ 2’ನಲ್ಲಿ (Pushpa 2) ಬ್ಯುಸಿಯಿರುವ ಕೊಡಗಿನ ಬ್ಯೂಟಿ, ಮಹೇಶ್ ಬಾಬು ನಟನೆಯ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ ದುಬಾರಿ ಸಂಭಾವನೆಯನ್ನೇ ಕೇಳಿದ್ದಾರಂತೆ. ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ಹೊರಗಿಟ್ಟ ಮೇಲೆ ಐಟಂ ಡ್ಯಾನ್ಸ್‌ನತ್ತ ನಟಿ ಮುಖ ಮಾಡಿರೋದು ಹಲವರ ಅಚ್ಚರಿಗೆ ಕಾರಣವಾಗಿದೆ.