ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna 3

ಕೂರ್ಗ್ ಬೆಡಗಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತನ್ನ ಹುಟ್ಟೂರು ಕೊಡಗಿಗೆ ನಟಿ ಭೇಟಿ ನೀಡಿದ್ದಾರೆ. ಸ್ನೇಹಿತೆಯ ಮದುವೆಯಲ್ಲಿ ರಾಯಲ್‌ ಬ್ಯೂ ಸೀರೆಯಲ್ಲಿ ನಟಿ ಮಿರ ಮಿರ ಅಂತ ಮಿಂಚಿದ್ದಾರೆ.

rashmika mandanna 1 1

ಕೈತುಂಬಾ ಸಿನಿಮಾಗಳಿವೆ. ಮುಂಬೈ, ಹೈದರಾಬಾದ್, ಫಾರಿನ್ ಅಂತ ಶೂಟಿಂಗ್‌ಗಾಗಿ ತಿರುಗಾಡುತ್ತಲೇ ಇರುತ್ತಾರೆ. ಇದರ ನಡುವೆ ಕೆಲಸಕ್ಕೆ ಬ್ರೇಕ್ ಕೊಟ್ಟು ಗೆಳತಿಯ ಮದುವೆಗೆ ರಶ್ಮಿಕಾ ಹಾಜರಿ ಹಾಕಿದ್ದಾರೆ. ಸ್ನೇಹಿತೆಗೆ ವಿಶೇಷವಾಗಿ ಶುಭಕೋರಿದ್ದಾರೆ. ತನ್ನ ಊರನ್ನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ‘ದ ಪ್ರೆಸೆಂಟ್’ ಚಿತ್ರದ ಮುಹೂರ್ತ

ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ. ಇವತ್ತು ನನ್ನ ಹುಡುಗಿಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನೀವು, ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಮತ್ತು ಆರೋಗ್ಯದಿಂದ ಇರು ಎಂದು ಬಯಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾನು ಮನೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ತನ್ನ ಊರಿನ ಶೈಲಿ ಕೊಡಗಿನ ಲುಕ್‌ನಲ್ಲಿ ಸೀರೆಯುಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ.

ಅಂದಹಾಗೆ, ಪುಷ್ಪ 2, ಅನಿಮಲ್‌ ಪಾರ್ಕ್‌, ಕುಬೇರ, ಚಾವ, ದಿ ಗರ್ಲ್‌ಫ್ರೆಂಡ್‌, ರೈನ್‌ಬೋ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

Share This Article