CinemaKarnatakaLatestMain PostSandalwoodSouth cinema

ವಿಜಯ್ ದೇವರಕೊಂಡ ಜೊತೆ ಮುಂದುವರೆದ ರಶ್ಮಿಕಾ ಮಂದಣ್ಣ ಮುನಿಸು

Advertisements

ತೆಲುಗು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದಾ ಇಬ್ಬರೂ ಅಂಟಿಕೊಂಡೇ ಓಡಾಡುತ್ತಿದ್ದರೆ, ವಿಜಯ್ ದೇವರಕೊಂಡ ಕುಟುಂಬದ ಅನೇಕ ಖಾಸಗಿ ಸಮಾರಂಭಗಳಿಗೂ ರಶ್ಮಿಕಾ ಹೋಗಿದ್ದಾರೆ. ಹುಟ್ಟು ಹಬ್ಬ, ಹೊಸ ವರ್ಷವನ್ನು ಜೊತೆ ಜೊತೆಯಾಗಿಯೇ ಆಚರಿಸಿಕೊಂಡಿದ್ದಾರೆ. ಆದರೆ, ಕೆಲ ತಿಂಗಳಿಂದ ಇಬ್ಬರೂ ನಾನೊಂದು ತೀರ, ನೀನೊಂದು ತೀರ ಎನ್ನುವಂತಾಗಿದ್ದಾರೆ.

ವಿಜಯ್ ದೇವರಕೊಂಡ ಅವರಿಂದ ರಶ್ಮಿಕಾ ಮಂದಣ್ಣ ಅಂತರ ಕಾದುಕೊಂಡಿದ್ದು ನಿಜ ಎನ್ನುತ್ತಿವೆ ತೆಲುಗು ಮಾಧ್ಯಮಗಳು. ಇವರಿಬ್ಬರೂ ದೂರ ಆಗುವುದಕ್ಕೆ ಕಾರಣ, ವಿಜಯ್ ದೇವರಕೊಂಡ ಅವರ ಬಾಲಿವುಡ್  ಚಿತ್ರ ಮತ್ತು ಆ ಚಿತ್ರದೊಳಗೆ ನಟಿಸಿರುವ ನಟಿ ಎಂದು ಹೇಳಲಾಗುತ್ತಿದೆ. ಆದರೆ, ಇದು ಗಾಸಿಪ್ ಎಂದೂ ತಿಪ್ಪೆಸಾರಿಸುವ ಕೆಲಸವೂ ಆಗಿದೆ. ಈ ಎಲ್ಲದರ ನಡುವೆ ಅಚ್ಚರಿ ಎನ್ನುವಂತಹ ಸುದ್ದಿಯೊಂದು ಬಂದಿತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎನ್ನುವುದು ಸುದ್ದಿಯ ಸಾರಾಂಶ ಆಗಿತ್ತು. ಇದನ್ನೂ ಓದಿ:ಬಹಿರಂಗವಾಗಿ ಕ್ಷಮೆ ಕೇಳಿದ ಮಲಯಾಳಂ ಖ್ಯಾತ ನಟ ಪೃಥ್ವಿ ಸುಕುಮಾರನ್

ಈಗದು ಗಾಸಿಪ್ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಜೊತೆಗಿನ ಮುನಿಸು ಇನ್ನೂ ಕರಗಿಲ್ಲವಾದ್ದರಿಂದ ರಶ್ಮಿಕಾ ಈ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಅವರು ಕೇವಲ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳಬೇಕಿತ್ತು. ಆದರೆ, ರಶ್ಮಿಕಾ ಅದಕ್ಕೆ ಒಪ್ಪಿಲ್ಲ ಎನ್ನುವುದು ಲೆಟೆಸ್ಟ್ ಸುದ್ದಿ. ಇದು ಎಲ್ಲಿಯವರೆಗೆ ಹೀಗೆಯೇ ಮುಂದುವರೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button