ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಏ.5ರಂದು ತಮ್ಮ 27ನೇ ವರ್ಷದ ಹುಟ್ಟುಹಬ್ಬವನ್ನು (Birthday) ಬಾಯ್‌ಫ್ರೆಂಡ್ ವಿಜಯ್ ದೇವರಕೊಂಡ (Vijay Devarakonda) ಜೊತೆ ರಶ್ಮಿಕಾ ಸೆಲೆಬ್ರೇಟ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಬಗ್ಗೆ ಸುದ್ದಿ ವೈರಲ್ ಆಗ್ತಿದ್ದಂತೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಯಶ್ ಜೊತೆ ದಿಲ್ ರಾಜು ಹೊಸ ಸಿನಿಮಾ- ಅಪ್‌ಡೇಟ್ ಹಂಚಿಕೊಂಡ ನಿರ್ಮಾಪಕ
ರಶ್ಮಿಕಾ ತೆಲುಗಿನ ‘ಗೀತಾ ಗೋವಿಂದಂ’ ಸಿನಿಮಾ ಸೂಪರ್ ಸಕ್ಸಸ್ ಕಂಡರು. ವಿಜಯ್‌ಗೆ ನಾಯಕಿಯಾಗಿ ಮಿಂಚಿದರು. ಅಂದಿನಿಂದ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್ ವಿಚಾರ ಸದ್ದು ಮಾಡುತ್ತಲೇ ಇದೆ. ಇಬ್ಬರು ಈ ವಿಚಾರ ಸುಳ್ಳು ಎಂದು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ಈಗ ರಶ್ಮಿಕಾ ಹುಟ್ಟುಹಬ್ಬದಂದು, ಇಬ್ಬರ ಡೇಟಿಂಗ್ ಸುದ್ದಿಗೆ ಪುಷ್ಟಿ ನೀಡುವಂತಹ ಫೋಟೋ ಇದೀಗ ಸಖತ್ ವೈರಲ್ ಆಗಿದೆ. ರಶ್ಮಿಕಾ ಬರ್ತ್‌ಡೇ ದಿನ ಇಬ್ಬರು ಒಟ್ಟಿಗೆ ಇದ್ದರು ಎನ್ನಲಾದ ಫೋಟೋಸ್ ಈಗ ಸದ್ದು ಮಾಡ್ತಿದೆ. ಈ ಬಗ್ಗೆ ಖಾಸಗಿ ಸುದ್ದಿ ಪೇಜ್‌ವೊಂದು ವರದಿ ಮಾಡಿದೆ.
ರಶ್ಮಿಕಾ ಮತ್ತು ವಿಜಯ್ ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬುದು ಪ್ರೂವ್ ಆಗಿದೆ. ಅವರು ಪ್ರೀತಿಯಲ್ಲಿ ಸೀರಿಯಸ್ ಆಗಿದ್ದಾರೆ. ವಿಜಯ್ ಅವರ ನೆಚ್ಚಿನ ಉಂಗುರವನ್ನ (Ring) ನಟಿ ಬೆರಳಿಗೆ ಧರಿಸಿದ್ದಾರೆ. ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಖಾಸಗಿ ಪೇಜ್‌ವೊಂದು ಪೋಸ್ಟ್ ಮಾಡಿದೆ. ಇದಕ್ಕೆ ನಟಿ ರಿಯಾಕ್ಟ್ ಮಾಡಿ, ಅಯ್ಯೋ.. ಹೆಚ್ಚು ಯೋಚಿಸಬೇಡಿ ಬಾಬು ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿಜಯ್ ಜೊತೆಗಿನ ಡೇಟಿಂಗ್ ಸುದ್ದಿಗೆ ರಶ್ಮಿಕಾ ರಿಯಾಕ್ಟ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಪುಷ್ಪ 2, ಅನಿಮಲ್, ನಿತಿನ್ ಜೊತೆ ಹೊಸ ಸಿನಿಮಾ, ಮಹಿಳಾ ಪ್ರಧಾನ ಚಿತ್ರ ‘ರೈನ್‌ಬೋ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ.