ಯಾದಗಿರಿ: ಜಿಲ್ಲೆಯ ಹುಣಸಗಿ (Hunasagi) ತಾಲೂಕಿನ ನಾರಾಯಣಪುರ (Narayanapura) ಗ್ರಾಮದಲ್ಲಿ ಎಮ್ಮೆಯ ಹೊಟ್ಟೆಯಲ್ಲಿ ಹೋರಿ ಕರು ಜನಿಸಿದ ಅಚ್ಚರಿಯ ಘಟನೆ ನಡೆದಿದೆ.
ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನಿಸಿದ್ದು, ಬಿಳಿ ಕರು ಕಂಡು ಗ್ರಾಮಸ್ಥರೇ ಅಚ್ಚರಿಯಾಗಿದ್ದಾರೆ. ಸುಮಾರು 10 ತಿಂಗಳು ಗರ್ಭಿಣಿಯಾಗಿದ್ದ ಎಮ್ಮೆಗೆ ಹೋರಿ ಕರು ಜನಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವಿಜಯೆಂದ್ರ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ: ಯತ್ನಾಳ್
ಹೊಲದಲ್ಲಿ ಎಮ್ಮೆ ಹಾಗೂ ಹೋರಿಯನ್ನು ಮಾಲೀಕ ಒಂದೇ ಕಡೆ ಕಟ್ಟುತ್ತಿದ್ದರು. ಇದೀಗ ಹೋರಿಯ ಸಂಪರ್ಕದಿ<ದಲೇ ಕರು ಜನನವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಎಮ್ಮೆಗೆ ಕಪ್ಪು ಬಣ್ಣದ ಕರು ಹುಟ್ಟುತ್ತದೆ. ಆದರೆ ಬಳಿ ಬಣ್ಣದ ಹೋರಿ ಕರು ಹುಟ್ಟಿದೆ.
